ಸುರತ್ಕಲ್ : ಕುಳಾಯಿಯ ಕಿರುಜೆಟ್ಟಿ ಕಾಮಗಾರಿ ನಡೆಯುವ ಬೀಚ್‌ನಲ್ಲಿ ಈಜಲು ತೆರಳಿದ್ದ ಮೂವರು ಪ್ರವಾಸಿಗರು ನೀರುಪಾಲಾಗಿದ್ದು, ಅಪಾಯದಲ್ಲಿ ಸಿಲುಕಿದ್ದ ಮತ್ತೋರ್ವನನ್ನು ರಕ್ಷಿಸಲಾಗಿದೆ
ಚಿತ್ರದುರ್ಗ ಜಿಲ್ಲೆಯ ಉಪ್ಪರಿಗೇನ ಹಳ್ಳಿಯ ಮಂಜುನಾಥ್ ಶಿವಮೊಗ್ಗದ ಶಿವಕುಮಾರ್ ಹಾಗೂ ಬೆಂಗಳೂರಿ ಜೆ.ಪಿ. ನಗರದ ಸತ್ಯವೇಲು ಮೃತಪಟ್ಟವರು. ಬೀದರ್ ಜಿಲ್ಲೆಯ ಹಂಗಾರಗ ಗ್ರಾಮದ ಪರಮೇಶ್ವರ್ ಎಂಬಾತನನ್ನು ಸ್ಥಳೀಯರು ರಕ್ಷಿಸಿದ್ದಾರೆ
ಬೆಂಗಳೂರಿನ ಎಎಂಸಿ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಇವರು ಜ.7ರಂದು ರಾತ್ರಿ ಬೆಂಗಳೂರಿನಿಂದ ಕಾರಿನಲ್ಲಿ ಬಂದಿದ್ದರು. ಬುಧವಾರ 12.30ಕ್ಕೆ ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಬೆಟ್ಟು-ಕುಳಾಯಿ ಬೀಚ್‌ನ ಕಿರುಜೆಟ್ಟಿ ಬಳಿ ಸಮುದ್ರಕ್ಕೆ ಇಳಿದಿದ್ದರು. ಬೀಚ್‌ನ ಅಪಾಯದ ಮಾಹಿತಿ ಇಲ್ಲದ ಅವರು ಸಮುದ್ರದ ಅಲೆಗೆ ಸಿಲುಕಿದ್ದರು. ಮಂಜುನಾಥ್, ಶಿವಕುಮಾರ್, ಸತ್ಯವೇಲು ಅವರನ್ನು ಅಲೆಗಳು ಎಳೆದೊಯ್ದಿತು.
ಸ್ಥಳೀಯರು ಸುರತ್ಕಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು ಸ್ಥಳೀಯರ ಸಹಕಾರದಲ್ಲಿ ನಾಪತ್ತೆಯಾದವರ ಪತ್ತೆಗೆ ಶ್ರಮಿಸಿದರು. ಬಲೆ ಹಾಗೂ ಹಗ್ಗದ ಸಹಾಯದಿಂದ ಮೂವರನ್ನು ಪತ್ತೆ ಮಾಡಿ ದಡಕ್ಕೆ ತರಲಾಯಿತು