113
ಕುಂದಾಪುರ : ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ನಾಲ್ವರನ್ನು ನಾರಾಯಣ ಪೊಲೀಸರು ಬಂಧಿಸಿದ್ದು ಗೋವುಗಳ ಸಹಿತ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಹಾವೇರಿಯಿಂದ ಮಂಗಳೂರಿನ ಕಡೆಗೆ ಯಾವುದೇ ಪರವಾನಗಿ ಹೊಂದಿರದೆ ಮಹೀಂದ್ರ ಬೊಲೆರೊ ಮ್ಯಾಕ್ಸ್ ಗೂಡ್ಸ್ ವಾಹನದಲ್ಲಿ 5 ಕೋಣ, 4 ಎಮ್ಮೆ ತುಂಬಿಸಿಕೊಂಡು ಸಾಗುತ್ತಿದ್ದ ವೇಳೆ ಶಂಕರನಾರಾಯಣ ಜಂಕ್ಷನ್ ಬಳಿ ಪೊಲೀಸರು ಪತ್ತೆ ಹಹಚ್ಚಿದ್ದು ಆರೋಪಿತರಾದ ಶಾಂತೇಶ ಚಂದ್ರಪ್ಪ ಜಾವಳ್ಳಿ, ಹಿವಾಯತ್ ನಾಸಿಪುಡಿ, ಸುನಿಲ್ ಲಕ್ಕಪ್ಪ ಜಾವಳ್ಳಿ, ಅರುಣ್ ಚಂದ್ರಪ್ಪ ಜಾವಳ್ಳಿ ಎಂಬವರನ್ನು ದಸ್ತಗಿರಿ ಮಾಡಿದ್ದಾರೆ.
ಹಾವೇರಿ ಪರಿಸರದಲ್ಲಿ ಗೋವುಗಳನ್ನು ಕಳವು ಮಾಡಿ ಸಾಗಾಟ ಮಾಡುತ್ತಿದ್ದದ್ದು ವಿಚಾರಣೆಯಲ್ಲಿ ತಿಳಿದುಬಂದಿದೆ. 3 ಮೊಬೈಲ್, ಜಾನುವಾರು, ಮಹೀಂದ್ರ ಮ್ಯಾಕ್ಸಿ ಕ್ಯಾಬ್ ಸ್ವಾಧೀನಪಡಿಸಿಕೊಳ್ಳ ಲಾಗಿದೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

