Home » ಚಾವರ್‍ಲೆಟ್ ಡಿಕ್ಕಿ ಹಲ್ಲೆ
 

ಚಾವರ್‍ಲೆಟ್ ಡಿಕ್ಕಿ ಹಲ್ಲೆ

by Kundapur Xpress
Spread the love

ಚಾವರ್‍ಲೆಟ್ ಡಿಕ್ಕಿ ಹಲ್ಲೆ

ಕುಂದಾಪುರ : ಅಂಬಿಕಾ ಡ್ರೈವಿಂಗ್ ಸ್ಕೂಲ್ ಮಾಲಕರಾದ ಸತೀಶ ದೇವಾಡಿಗ ಎಂಬುವರು ಸನತ್ ಎಂಬುವವರನ್ನು ಡ್ರೈವಿಂಗ್ ಸೀಟಿನಲ್ಲಿ ಕುಳಿಸಿ ತರಬೇತಿ ನೀಡುತ್ತಿರುವಾಗ ಹಿಂದಿನಿಂದ ಬಂದ ಚಾವರ್‍ಲೆಟ್ ಟ್ರಾವೆಲ್ಸ್ ವಾಹನವು ಡಿಕ್ಕಿ ಹೊಡೆಯಿತು. ಸಮಯದಲ್ಲಿ ಕಾರಿನ ಮಾಲಕರಾದ ಸತೀಶ ದೇವಾಡಿಗರವರು ಕಾರಿನಿಂದ ಇಳಿದು ಇದು ಡ್ರೈವಿಂಗ್ ಸ್ಕೂಲ್ ವಾಹನ ನಿಮಗೆ ಕಣ್ಣು ಕಾಣುವುದಿಲ್ಲವೇ ಎಂದು ಪ್ರಶ್ನಿಸಿದಾಗ ಚಾವರಲೆಟ್ ವಾಹನ ಒಳಗಡೆ ಇದ್ದ ನಾಲ್ಕು ಜನರು ಸತೀಶ ದೇವಾಡಿಗರ ಮೇಲೆ ಏಕಾಏಕೀ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದವರು ವಿಜಯ, ಸುಬ್ರಹ್ಮಣ್ಯ, ಸದಾಶಿವ ಹಾಗೂ ಅಣ್ಣಪ್ಪ ಎಂದು ತಿಳಿದು ಬಂದಿದೆ.

   

Related Articles

error: Content is protected !!