Home » ಮಣ್ಣಿನಡಿಯಲ್ಲಿ ಸಿಲುಕಿದ ಮಹಿಳೆಯ ರಕ್ಷಣೆ
 

ಮಣ್ಣಿನಡಿಯಲ್ಲಿ ಸಿಲುಕಿದ ಮಹಿಳೆಯ ರಕ್ಷಣೆ

by Kundapur Xpress
Spread the love

ಕುಂದಾಪುರ : ಸ್ಕೂಟಿಯಲ್ಲಿ ಸಾಗುತ್ತಿದ್ದ ಮಹಿಳೆಗೆ ಮಣ್ಣು ತುಂಬಿದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿ ಮಗುಚಿ ಬಿದ್ದು ಮಹಿಳೆ ಮಣ್ಣಿನಡಿ ಸಿಲುಕಿರುವ ಘಟನೆ ಇತ್ತೀಚಿಗೆ ಬೈಂದೂರು ತಾಲೋಕಿನ ನಾಗೂರು ಉಪ್ರಳ್ಳಿ  ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ್ದು ಮಹಿಳೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಮಣ್ಣಿನಡಿ ಸಿಲುಕಿದ ಮಹಿಳೆ ಉಪ್ರಳ್ಳಿಯ ಆರತಿ ಶೆಟ್ಟಿ ಎಂದು ತಿಳಿದು ಬಂದಿದೆ

ಮಣ್ಣು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿ ಹೋಗುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಮಗುಚಿ ಬಿದ್ದು ಲಾರಿಯಲ್ಲಿದ್ದ ಮಣ್ಣು ಸ್ಕೂಟರಲ್ಲಿದ್ದ ಮಹಿಳೆ ಮೇಲೆ ಬಿದ್ದಿದ್ದರಿಂದ ಮಣ್ಣಿನಡಿಯಲ್ಲಿ ಮಹಿಳೆ ಸಿಲುಕಿ ಕೊಂಡಿದ್ದಾರೆ.

ಅಲ್ಲೆ ಸ್ಥಳದಲ್ಲಿದ್ದ ಸಮಾಜ ಸೇವಕ ಕೋಡಿ ಅಶೋಕ ಪೂಜಾರಿ ಅವರು ತನ್ನ ಕೈಗಳಿಂದಲೇ ಮಣ್ಣನ್ನು ತೆಗೆದು ಮಹಿಳೆಯನ್ನು ರಕ್ಷಿಸಿ ನಂತರ ಸ್ಥಳೀಯರ ಸಹಕಾರದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ

ಸಮಾಜ ಸೇವಕ ಕೋಡಿ ಅಶೋಕ ಪೂಜಾರಿ ಅವರ  ಕ್ಲಪ್ತ ಸಮಯೋಚಿತ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ

 

Related Articles

error: Content is protected !!