ಕುಂದಾಪುರ : ಗಂಗೊಳ್ಳಿ ಸಮೀಪದ ಗುಜ್ಜಾಡಿಯ ಬಸ್ ನಿಲ್ದಾಣದ ಬಳಿ ಪಾದಾಚಾರಿಯೊಬ್ಬರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯಶೋಧ ಎಂಬವರು ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ನಡೆದಿದೆ ಬೈಕ್ ಸವಾರ ಪರಾರಿಯಾಗಿದ್ದಾನೆ
ಗುಜ್ಜಾಡಿ ಬಸ್ ನಿಲ್ದಾಣದ ಬಳಿ ಇರುವ ಮಣಿಕಂಠ ಗ್ಯಾರೇಜ್ ಎದುರು ಇರುವ ಮಣ್ಣು ರಸ್ತೆಯಲ್ಲಿ ತ್ರಾಸಿ ಕಡೆಯಿಂದ ಗಂಗೊಳ್ಳಿ ಕಡೆಗೆ ಯಶೋಧ ಶೇರುಗಾರ್ ಎಂಬವರು ನಡೆದುಕೊಂಡು ಹೋಗುತ್ತಿರುವಾಗ ಗಂಗೊಳ್ಳಿ ಕಡೆಯಿಂದ ತ್ರಾಸಿ ಕಡೆಗೆ ಬೈಕ್ ಸವಾರನು ತಾನು ಚಲಾಯಿಸಿದ ಬೈಕನ್ನು ಅತಿ ವೇಗದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರ ಎಡಭಾಗಕ್ಕೆ ಚಲಾಯಿಸಿ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಯಶೋಧರವರಿಗೆ ಡಿಕ್ಕಿ ಹೋಡೆದ ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ
ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು . ಡಿಕ್ಕಿ ಹೊಡೆದೆ ಬೈಕ್ ನಂಬರ್ KA-20 EY-4629 ಆಗಿರುತ್ತದೆ ಎಂದು ತಿಳಿದು ಬಂದಿದೆ