ಕುಂದಾಪುರ : ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೀಯಾ ಕಾರೊಂದು ಗೂಡ್ಸ್ ರಿಕ್ಷಾಕ್ಕೆ ಡಿಕ್ಕಿ ಹೊಡೆದು ರಸ್ತೆ ವಿಭಾಜಕದ ಮೇಲೆ ಹತ್ತಿ ನಿಂತಿದೆ
ಗೂಡ್ಸ್ ರಿಕ್ಷಾ ಚಾಲಕ ರಾಜ ಎಂಬವರಿಗೆ ಪೆಟ್ಟಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಅಪಘಾತದ ರಭಸಕ್ಕೆ ಕೀಯಾ ಕಾರಿನ ಮುಂಭಾಗವು ಸಂಪೂರ್ಣ ಗುಜ್ಜು ನುಜ್ಜಾಗಿದ್ದು ಕಾರಿನ ಬ್ಯಾಟರಿ ಹೊರ ಬಿದ್ದಿದೆ
ಕಾರು ಚಾಲಕನು ವಿರುದ್ದ ದಿಕ್ಕಿನಲ್ಲಿ ಕಾರನ್ನು ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಸ್ಥಳಿಯರು ತಿಳಿಸಿದ್ದು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ