ಕುಂದಾಪುರ: ಬೈಂದೂರಿನ ನಾವುಂದ ಗ್ರಾಮದಲ್ಲಿ ಬುಧವಾರ ರಾತ್ರಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನೇಪಾಳ ಮೂಲದ ಪ್ರವಾಸಿಗರೊಬ್ಬರು ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಪಾಂಬಾ ಚೀರ್ರಿ ಶೆರ್ಪಾ (65) ಎಂದು ಗುರುತಿಸಲಾಗಿದೆ
ಅವರು ತಮ್ಮ ಪತ್ನಿ ಹಾಗೂ ಸಂಭಂದಿಕರೊಂದಿಗೆ ನೇಪಾಳದಿಂದ ಹೈದರಾಬಾದ್ ಗೆ ವಿಮಾನದಲ್ಲಿ ಆಗಮಿಸಿ ಅಲ್ಲಿಂದ ರಾಜ್ಯಕ್ಕೆ ಪ್ರವಾಸ ಬಂದಿದ್ದರು.
ಡಿ.8ರಂದು ಕುಶಾಲನಗರದಲ್ಲಿನ ದಲೈಲಾಮಾರ ಆಶ್ರಮಕ್ಕೆ ತೆರಳಿ ಅಲ್ಲಿ ಉಳಿದುಕೊಂಡು ಡಿ.11ರಂದು ಚಾಲಕ ಮಹಮ್ಮದ್ ಷರೀಫ್ ಅವರ ಇನೋವಾ ಕಾರಿನಲ್ಲಿ ಮಂಗಳೂರಿನಿಂದ ಉಡುಪಿ ಮಾರ್ಗವಾಗಿ ಗೋವಾಕ್ಕೆ ತೆರಳುತ್ತಿದ್ದ ಸಂದರ್ಭ ನಾವುಂದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಪಾಂಬಾ ಚೀರಿ ಶೆರ್ಪಾ (65) ಗಂಭೀರವಾಗಿ ಗಾಯಗೊಂಡಿದ್ದು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಉಳಿದ 5 ಮಂದಿ ಗಾಯಾಳುಗಳನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ