ಬೈಂದೂರು : ಆರಾಟೆ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಅವೈಜ್ಞಾನಿಕ ಕಾಮಗಾರಿ ಹಾಗೂ ಡಿವೈಡರ್ ನಿರ್ಮಾಣ ಮಾಡಿದ್ದರ ಪರಿಣಾಮ ಕುಂದಾಪುರದಿಂದ ಬೈಂದೂರು ಭಾಗಕ್ಕೆ ಸಾಗುತ್ತಿದ್ದ ಎರಡು ಲಾರಿಗಳು ಕನ್ನಡ ಕುದ್ರು ಎಂಬಲ್ಲಿ ಡಿವೈಡರ್ ಬಳಿ ರಾಷ್ಟ್ರೀಯ ಹೆದ್ದಾರಿ ಮಧ್ಯಭಾಗದಲ್ಲಿ ಹಂಪ್ ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ಮುಂದಿನ ಲಾರಿಗೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದು ಹಿಂಬದಿ ಲಾರಿ ಚಾಲಕನ ಕಾಲಿಗೆ ಗಂಭೀರ ಗಾಯಗೊಂಡು ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ
ಕಳೆದ ಎರಡು ತಿಂಗಳಿಂದ ದಿನ ನಿತ್ಯ ಅವೈಜ್ಞಾನಿಕ ಡಿವೈಡರ್, ಹಾಗೂ ರಾತ್ರಿಯ ವೇಳೆಯಲ್ಲಿ ದಾರಿದೀಪ ಇಲ್ಲದೆ ವಾಹನಗಳು ಸಾಲುಗಟ್ಟಿ ಅಪಘಾತ ಆಗುತ್ತಿದ್ದು ವಾಹನ ಸವಾರರಿಗೆ ಕಂಟಕ ಎದುರಾಗಿದೆ ಹೆದ್ದಾರಿ ಪ್ರಾಧಿಕಾರ, ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ
ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಕಡೆ ಗಮನಹರಿಸಿ ಅವೈಜ್ಞಾನಿಕ ಕಾಮಗಾರಿ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಎರಡು ತಿಂಗಳಿಂದ ದಿನನಿತ್ಯದ ವಾಹನ ಅಪಘಾತದಿಂದ 2 ಸಾವು ಹಾಗೂ ಹಲವಾರು ಮಂದಿಗೆ ಸಣ್ಣ ಪುಟ್ಟ ಗಾಯಗಳು ಸಂಭವಿಸುತ್ತಿದ್ದು ಜನರ ಆಕೋಶಕ್ಕೆ ಕಾರಣವಾಗಿದೆ