ಕುಂದಾಪುರ : ಶಾಲಾ ವಾಹನಕ್ಕೆ ದಾರಿ ಮಾಡಿಕೊಡುವ ಸಲುವಾಗಿ ಬದಿಗೆ ಸರಿದ ಬೈಕ್ ಸ್ಕಿಡ್ ಆದ ಪರಿಣಾಮ ಬಿದ್ದು ಗಾಯಗೊಂಡ ಸವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಶ್ರೀ ನೇರಳಕಟ್ಟೆಯ ಕೋ ಆಪರೇಟಿವ್ ಸೊಸೈಟಿಯ ಉದ್ಯೋಗಿ ಪ್ರಕಾಶ್ (37) ಮೃತಪಟ್ಟವರು. ಗುಲ್ವಾಡಿ ಗ್ರಾಮದ ಉದಯ ನಗರ ಜನತಾ ಕಾಲೋನಿ ಸಮೀಪ ಶಾಲಾ ವಾಹನಕ್ಕೆ’ ದಾರಿ ಕೊಡುವ ಸಲುವಾಗಿ ಬದಿಗೆ ಸರಿದಾಗ ಬೈಕ್ ಮಗುಚಿತ್ತು ರಸ್ತೆಗೆ ಬಿದ್ದ ಪ್ರಕಾಶ್ ಅವರ ತಲೆಗೆ ಏಟು ತಗುಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆಂದು ಸಹೋದರ ಪುನೀತ್ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ