Home » ಪಿಕ್‌ಅಪ್ ವಾಹನ ಢಿಕ್ಕಿ : ಮಹಿಳೆ ಮೃತ್ಯು
 

ಪಿಕ್‌ಅಪ್ ವಾಹನ ಢಿಕ್ಕಿ : ಮಹಿಳೆ ಮೃತ್ಯು

by Kundapur Xpress
Spread the love

ಕುಂದಾಪುರ : ಮರವಂತೆ ರಾಷ್ಟ್ರೀಯ ಹೆದ್ದಾರಿ ಬಳಿ ನಿಂತಿದ್ದ ಮಹಿಳೆಗೆ ಪಿಕ್‌ಅಪ್ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಸೀಲ್ಯಾಂಡ್ ಹೊಟೇಲ್ ಬಳಿ ನಡೆದಿದೆ. ಮೃತರನ್ನು ಬೈಂದೂರು ತಾಲೋಕಿನ ಯಳಜಿತ್ ಗ್ರಾಮದ ಬಾಬು ಎಂಬವರ ಪತ್ನಿ ಲಕ್ಷ್ಮೀ (45ವರ್ಷ) ಎಂದು ಗುರುತಿಸಲಾಗಿದೆ.

ಕುಂದಾಪುರದಿಂದ ಬೈಂದೂರು ಕಡೆಗೆ ತೆರಳುತ್ತಿದ್ದ ಪಿಕ್ ಅಪ್ ವಾಹನವು ಅತೀ ವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಬಂದು ಲಕ್ಷ್ಮೀ ಅವರಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಲಕ್ಷ್ಮೀ ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದ್ದು  ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

error: Content is protected !!