Home » ಟೆಂಪೊ ಡಿಕ್ಕಿ : ಬೈಕ್ ಸವಾರ ಸಾವು
 

ಟೆಂಪೊ ಡಿಕ್ಕಿ : ಬೈಕ್ ಸವಾರ ಸಾವು

by Kundapur Xpress
Spread the love

ಕಾರ್ಕಳ : ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಮಾಳ ಮಂಜಲ್ವಾರ್ ಎಂಬಲ್ಲಿ ನಡೆದಿದೆ ಮೃತಪಟ್ಟವರನ್ನು ಮಾಳ ನಿವಾಸಿ ರಾಘವೇಂದ್ರ  (40 ವರ್ಷ) ಎಂದು ಗುರುತಿಸಲಾಗಿದೆ

ಅವರು ಮಾಳ ಮಂಜಲ್ವಾರ್ ಎಂಬಲ್ಲಿಗೆ ತಲುಪುವ ವೇಳೆ ಮಾಳ ಚೌಕಿಯಿಂದ ಬಜಗೋಳಿ ಕಡೆಗೆ ಅತೀ ವೇಗದಿಂದ ಬರುತ್ತಿದ್ದ ಟೆಂಪೋ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ರಾಘವೇಂದ್ರ ಅವರನ್ನು ಕಾರ್ಕಳ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Related Articles

error: Content is protected !!