ಮಣಿಪಾಲ:ಹೆರ್ಗಾ ಗ್ರಾಮದ ಈಶ್ವರ ನಗರದ ನಿವಾಸಿಯಾದ ಉಮೇಶ್ ಶೆಣೈ ಎಂಬವರು ಸ್ಕೂಟರ್ ನಿಂದ ಬಿದ್ದು ಗಾಯಗೊಂಡಿದ್ದು ಕೆ ಎಂ ಸಿ ಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದರು ತಮ್ಮ ಮನೆಯಿಂದ ಮಣಿಪಾಲದ ಕಡೆಗೆ ಬರುವಾಗ ಮಣಿಪಾಲದ ಅಶ್ಲೇಷ ಹೋಟೇಲ್ ಬಳಿ ಪರ್ಕಳ – ಮಣಿಪಾಲ ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಸ್ಕೂಟರ್ ನ ಹತೋಟಿ ತಪ್ಪಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ತಲೆಗೆ ತೀವ್ರವಾಗಿ ಗಾಯ ಉಂಟಾಗಿದ್ದು, ಅಲ್ಲದೇ ಮುಖ, ಹಾಗೂ ಮೈ ಕೈಗೂ ಗಾಯ ಉಂಟಾಗಿತ್ತದೆ. ಕೂಡಲೇ ಅವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿದ್ದು ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ದಿನಾಂಕ 15/04/2023 ರಂದು ರಾತ್ರಿ 9.00 ಗಂಟೆಗೆ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ