225
ಸ್ಕೂಟಿಗೆ ಟೆಂಪೋ ಟ್ರಾವೆಲ್ಲರ್ ಢಿಕ್ಕಿ
ಕುಂದಾಪುರ : ಕುಂಭಾಸಿಯ ಕೊರವಡಿ ಕ್ರಾಸ್ ಬಳಿ ಸ್ಕೂಟಿಗೆ ಟೆಂಪೋ ಟ್ರಾವೆಲ್ಲರ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರನಾದ ಶುಕುರ್ ಎಂಬವರು ಮೃತಪಟ್ಟ ಘಟನೆ ವರದಿಯಾಗಿದೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಸ್ಕೂಟಿಗೆ ಹಿಂದಿನಿಂದ ಬಂದ ಬಿಳಿ ಬಣ್ಣದ ಟೆಂಪೋ ಟ್ರಾವೆಲ್ಲರ್ ಸ್ಕೂಟಿಯ ಎಡಭಾಗದಿಂದ ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟಿಗೆ ತಾಗಿಸಿದ್ದು ಸ್ಕೂಟಿ ಸವಾರನು ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಏಳೆದುಕೊಂಡು ಹೋದ ಪರಿಣಾಮ ಸ್ಕೂಟಿ ಸವಾರನಿಗೆ ಬಲಹಣೆ ಹಾಗೂ ಮೈಕೈಗಳಿದೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾನೆ ಟೆಂಪೋ ಟ್ರಾವೆಲ್ಲರ್ ನ ಚಾಲಕನಾದ ಗೋಪಾಲ್ ಆಚಾರ್ ರವರ ಅತೀವೇಗ ಹಾಗೂ ಅಜಾಗರೂಕತೆಯೇ ಅಪಘಾತಕ್ಕೆ ಕಾರಣವಾಗಿದ್ದು ಕೋಟಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

