ಕುಂದಾಪುರ : ನಗರದ ಹಂಗಳೂರು ಸಮೀಪದ ದುರ್ಗಾಂಬ ಬಸ್ ಡಿಪೋ ಎದುರುಗಡೆಯಲ್ಲಿ ಬೈಕ್ಗೆ ಬಸ್ ಢಿಕ್ಕಿಯಾಗಿ ಕುಂದಾಪುರ ಪುರಸಭೆ ಪೌರಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ
ಕುಂದಾಪುರ ನಗರದ ಅಂಬೇಡ್ಕರ್ ಕಾಲೋನಿಯ ನಿವಾಸಿಯಾದ ಸುಂದರ್ (39 ವರ್ಷ) ಮೃತಪಟ್ಟ ದುರ್ದೈವಿ ಮೂಲತ ಬಾರ್ಕೂರಿನವರಾದ ಸುಂದರ್ ಕುಂದಾಪುರ ಪುರಸಭಯಲ್ಲಿ ಕಳೆದ 15 ವರ್ಷಗಳಿಂದ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದರು ಇತ್ತಿಚಿಗಷ್ಟೇ ಖಾಯಂ ನೇಮಕಾತಿ ಹೊಂದಿದ್ದರು
ಅವಿವಾಹಿತರಾಗಿದ್ದ ಸುಂದರ್ ಅವರು ಕೋಟೇಶ್ವರ ಕಡೆಯಿಂದ ಬೈಕ್ನಲ್ಲಿ ಸರ್ವಿಸ್ ರಸ್ತೆಯಲ್ಲಿ ಬರುತ್ತಿದ್ದಾಗ ಹೆದ್ದಾರಿಯಿಂದ ದುರ್ಗಾಂಬ ಬಸ್ ಟ್ರಿಪ್ ಮುಗಿಸಿ ಡಿಪೋಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಬಸ್ಸಿನ ಹಿಂಬದಿ ಚಕ್ರಕ್ಕೆ ಬೈಕ್ ಸಿಲುಕಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ
ಸುದ್ದಿ ತಿಳಿದ ತಕ್ಷಣ ಪೌರ ಕಾರ್ಮಿಕರು ಹಾಗೂ ಪುರಸಭಾ ಅಧಿಕಾರಿಗಳು ಘಟನಾ ಸ್ಥಳ ಹಾಗೂ ಸರಕಾರಿ ಅಸ್ಪತ್ರೆಗೆ ಆಗಮಿಸಿದ್ದರು ಕುಂದಾಪುರ ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ