ಬೈಂದೂರು: ಬೈಂದೂರಿನ ಯಡ್ತೆರೆ ಗ್ರಾಮದ ಶೆಟ್ಟಿ ಬಾರ್ ಅಂಡ್ ರೆಸ್ಟೋರೆಂಟ್ ಎದುರುಗಡೆಯ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ನಿಂತಿದ್ದ ರಾಮ ಪೂಜಾರಿ ಎಂಬವರಿಗೆ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಹೋಗುತ್ತಿದ್ದ ಈಚರ್ ಲಾರಿ ಒಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದು ಗಂಭೀರವಾಗಿ ಗಾಯಗೊಂಡ ರಾಮ ಪೂಜಾರಿಯವರನ್ನು ಮಣಿಪಾಲದ ಕೆ ಎಂ ಸಿ ಆಸ್ಪತ್ರೆಗೆ ಸೇರಿಸಲಾಗಿದೆ
ಈಚರ್ ಡಿಕ್ಕಿ ಹೊಡೆದ ರಬಸಕ್ಕೆ ರಾಮ ಪೂಜಾರಿಯವರ ಮೈ ಕೈಕಾಲಿಗೆ ಗಂಭೀರ ಗಾಯವಾಗಿದ್ದು ಮೂಗಿನಿಂದ ರಕ್ತ ಸೋರಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ತಕ್ಷಣ ಅವರನ್ನು ಸ್ಥಳೀಯರು 108 ಆಂಬುಲೆನ್ಸ್ ಮೂಲಕ ಬೈಂದೂರಿನ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲರ ಕೆಎಂಸಿ ಆಸ್ಪತ್ರೆಗೆ ಸೇರಿಸಲಾಗಿದೆ ಡಿಕ್ಕಿ ಹೊಡೆದ ಈಚರ್ ಲಾರಿಯ ನಂಬರ್ ಕೆ ಎ 63- 9108 ಚಾಲಕನು ಡಿಕ್ಕಿ ಹೊಡೆದು ಲಾರಿಯನ್ನು ನಿಲ್ಲಿಸದೆ ಪರಾರಿಯಾದ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪೋಲೀಸರು ತನಿಖೆ ಕೈಗೊಂಡಿದ್ದಾರೆ