Home » ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳ ಸಾಗಾಟ ಪತ್ತೆ
 

ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳ ಸಾಗಾಟ ಪತ್ತೆ

1.15 ಕೋಟಿ ರುಪಾಯಿ ಮೌಲ್ಯ

by Kundapur Xpress
Spread the love

‘ಮಂಗಳೂರು : ದುಬೈ ಮತ್ತು ಅಬುದಾಭಿಯಿಂದ ಮಂಗಳೂರಿಗೆ ಬಂದಿಳಿದ ಮೂವರು ಪ್ರಯಾಣಿಕರಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 1.15,54,061 ರು. ಮೌಲ್ಯದ ಚಿನ್ನ ಮತ್ತು ಕೇಸರಿಯನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.  ಏರ್‌ ಇಂಡಿಯಾ ಮತ್ತು ಇಂಡಿಗೋ ವಿಮಾನಗಳಲ್ಲಿ ಕಾಸರಗೋಡು ಮತ್ತು ಹೊನ್ನಾವರದ ಮೂವರು ಪ್ರಯಾಣಿಕರ ಅನುಮಾನಾಸ್ಪದ ಚಲನವಲನಗಳನ್ನು ಗಮನಿಸಿದ ಅಧಿಕಾರಿಗಳು ವಶಕ್ಕೆ ಪಡೆದು ತಪಾಸಣೆಗೊಳಪಡಿಸಿದಾಗ ಒಳ ಉಡುಪುಗಳಲ್ಲಿ ಬಚ್ಚಿಟ್ಟಿದ್ದ ಚಿನ್ನ ಪತ್ತೆಯಾಗಿದೆ. ಇನ್ನೊಂದು ಪ್ರಕರಣದಲ್ಲಿ ಗುದದ್ವಾರದಲ್ಲಿ ಅಡಗಿಸಿಟ್ಟಿದ್ದ ಚಿನ್ನ ಪತ್ತೆಯಾಗಿದೆ. ಅಲ್ಲದೆ ರಟ್ಟಿನ ಪೆಟ್ಟಿಗೆಯ ತಳದಲ್ಲಿ ಅಂಟಿಸಿ ಪುಡಿ ರೂಪದಲ್ಲಿ ಚಿನ್ನ ಸಾಗಿಸುತ್ತಿರುವುದನ್ನು ಪತ್ತೆ ಮಾಡಿದ್ದಾರೆ. 1429 ಗ್ರಾಂ ತೂಕದ ಚಿನ್ನದ ಆಭರಣಗಳು ಮತ್ತು 478 ಗ್ರಾಂ ತೂಕದ ಕೇಸರಿ ವಶಪಡಿಸಿಕೊಳ್ಳಲಾಗಿದೆ.

 

Related Articles

error: Content is protected !!