ಹೆಬ್ರಿ : ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ ಹೆಬ್ರಿಯ ಚಾರ ಗ್ರಾಮದ ಹುತ್ತುರ್ಕೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ
ಹುತ್ತುರ್ಕೆಯ ಆನಂದ ನಾಯ್ಕ (55ವರ್ಷ) ಹೆಬ್ರಿಯ ಹೋಟೆಲೊಂದರಲ್ಲಿ ಕೆಲಸ ಮಾಡಿ ಕೊಂಡಿದ್ದು, ಜೂ.7ರಂದು ಕೆಲಸಕ್ಕೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಹೋದವರು ಮರಳಿ ಬಾರದೆ ನಾಪತ್ತೆಯಾಗಿದ್ದರು. ಅವರ ಮಗ ಆದರ್ಶ್ ನಾಯ್ಕ ತಂದೆ ಕಾಣೆಯಾದ ಕುರಿತು ಹೆಬ್ರಿ ಠಾಣೆಗೆ ದೂರು ಸಲ್ಲಿಸಿದ್ದರು
ಆನಂದ್ ಅವರ ಮೃತದೇಹ ಹುತ್ತುರ್ಕೆಯ ಮೋರಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಸಾರ್ವಜನಿಕರು ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರು ಮೃತದೇಹವನ್ನುಮೋರಿಯಿಂದ ಮೇಲಕ್ಕೆತ್ತಿದ್ದಾರೆ