63
ಚಂಡೀಗಢ : ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧನದಲ್ಲಿರುವ ಸಾಮಾಜಿಕ ಮಾಧ್ಯಮ ಇನ್ಸುಯೆನ್ಸರ್ ಜ್ಯೋತಿ ಮಲ್ಲೋತ್ರಾ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಪಂಜಾಬ್ ಮೂಲದ ಯೂಟ್ಯೂಬರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಪಾಕಿಸ್ತಾನಿ ಗುಪ್ತಚರ ಮತ್ತು ಸೇನಾ ಅಧಿಕಾರಿಗಳೊಂದಿಗೆ ಸಂಪರ್ಕ ಕಲ್ಪಿಸುವ ಭಯೋತ್ಪಾದನಾ ಬೆಂಬಲಿತ ಬೇಹುಗಾರಿಕೆ ಜಾಲ ಬಯಲಿಗೆಳೆದ ನಂತರ ಬಂಧಿಸಲಾಗಿದೆ. ಜಸ್ಬೀರ್ ಸಿಂಗ್ ಅಲಿಯಾಸ್ ಜಾನ್ ಮಹಲ್ (41) ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಗಾಗಿ ಬೇಹುಗಾರಿಕೆ ನಡೆಸುತ್ತಿದ್ದನು ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಹೇಳಿದ್ದಾರೆ.

