Home » ಪ್ರವಾಹ ಪೀಡಿತ ಪ್ರದೇಶಕ್ಕೆ ಆರ್‌ಎಸ್‌ಎಸ್‌ ನೆರವು
 

ಪ್ರವಾಹ ಪೀಡಿತ ಪ್ರದೇಶಕ್ಕೆ ಆರ್‌ಎಸ್‌ಎಸ್‌ ನೆರವು

by Kundapur Xpress
Spread the love

ಇಂಫಾಲ : ಮಣಿಪುರದ ವಿವಿಧ ಭಾಗಗಳಲ್ಲಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್ ಎಸ್) ಮಣಿಪುರ ಪ್ರಾಂತ ಮತ್ತು ಮಣಿಪುರ ಸೇವಾ ಸಮಿತಿಯ ಕಾರ್ಯಕರ್ತರು ಸಹಾಯ ಹಸ್ತ ಚಾಚಿದ್ದಾರೆ

ಕಳೆದ ಏಳು ದಿನಗಳಿಂದ ಸುರಿಯುತ್ತಿರುವ ಮಳೆ ರಾಜ್ಯದ ಮೇಲೆ ತೀವ್ರ ಪರಿಣಾಮ ಬೀರಿದ್ದು, ಇಂಫಾಲ ಪೂರ್ವ ಮತ್ತು ಪಶ್ಚಿಮ, ಸೇನಾಪತಿ, ಕಾಂಗ್‌ಪೋಕ್ಷಿ, ತೌಬಲ್, ಜಿರಿಬಮ್ ಮತ್ತು ಬಿಷ್ಣುಪುರ ಜಿಲ್ಲೆಗಳಲ್ಲಿ ಗಮನಾರ್ಹವಾಗಿ ಹಾನಿ ಸಂಭವಿಸಿದೆ. అుమిలా, ತಮೆಂಗ್ ಲಾಂಗ್ ಮತ್ತು ಫರ್ಜಾಲ್ ನಲ್ಲಿ ಭೂಕುಸಿತಗಳು ಉಂಟಾಗಿವೆ.

25 ಜನರ ರಕ್ಷಣೆ :

ಆರ್‌ಎಸ್‌ಎಸ್ 250 ಸ್ವಯಂಸೇವಕರು ಜೂ.1ರಿಂದ ವಾಂಗ್, ಕೀಥೆಲ್ ಅಶಾಂಗ್ಲಿ, ಮೀಹೌಬಮ್ ಲ್ಯಾಂಪಕ್, ಅಯಾಂಗ್‌ಲಿ ಹೈನ್ ಮಖೋಂಗ್, ಕೊಂಗ್‌ಪಾಲ್, ಖುರೈ ಸಜಿ ಗೋರ್ ಲೈಕೈ, ಪಾಪುಲರ್ ರಿಲೀಫ್ ಕ್ಯಾಂಪ್, ಹೈಕು ಮಖೋಂಗ್, ಸಲಾಂಥಾಂಗ್, ನಾಂಗ್‌ಮೈಬಂಗ್ ಪರಿಹಾರ ಶಿಬಿರಗಳು ಮತ್ತು ಇತರ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸ್ವಯಂಸೇವಕರು 3,251 ಮನೆಗಳಿಗೆ ಸೇವೆ ನೀಡಿದ್ದಾರೆ. ಇದಲ್ಲದೆ, ಆ‌ರ್.ಎಸ್‌ಎಸ್ ಮಣಿಪುರ ಪ್ರಾಂತದ ತಂಡವು 25 ಜನರನ್ನು ರಕ್ಷಿಸಿದೆ ಎಂದು ಆರ್‌ಎಸ್‌ಎಸ್ ಇಂಫಾಲ ಜಿಲ್ಲಾ ಕಾರ್ಯವಾಹ ಬ್ರಹ್ಮಚಾರಿಮಾಯುಮ್ ಬಿಲ್ಕಿ ಶರ್ಮಾ ಹೇಳಿದ್ದಾರೆ.

 

Related Articles

error: Content is protected !!