ಬ್ರಹ್ಮಾವರ:ಚೇರ್ಕಾಡಿ ಗ್ರಾಮದ ನೂಜಿಬೈಲ್ ಎಂಬಲ್ಲಿ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪಿಯಾದ ಗ್ರೇಗೋರಿ ಡಿ ಅಲ್ಮೇಡ ಇವರನ್ನು ಬ್ರಹ್ಮಾವರ ಪೊಲೀಸರು ಬಂದಿಸಿದ್ದಾರೆ ಖಚಿತ ಮಾಹಿತಿ ಮೇರೆಗೆ ಬ್ರಹ್ಮಾವರದ ಉಪನಿರೀಕ್ಷಕರಾದ ಮಹಾಂತೇಶ್ ಉದಯ್ ನಾಯಕ್ ಇವರು ಸಿಬ್ಬಂದಿಯವರೊಂದಿಗೆ ನೂಜಿಬೈಲ್ ನಲ್ಲಿ ಅಕ್ರಮ ಕಳ್ಳಬಟ್ಟಿ ತಯಾರಿಕಾ ಘಟಕಕ್ಕೆ ದಾಳಿ ಮಾಡಿದಾಗ ಆರೋಪಿಯಾದ ಗ್ರೇಗೋರಿ ಡಿ ಅಲ್ಮೇಡ ಅವರು ಪರಾರಿಯಾಗಲು ಯತ್ನಿಸಿದ್ದು ಸಿಬ್ಬಂದಿಯವರು ಹಿಡಿದು ವಿಚಾರಿಸಿದಾಗ ಮನೆಯ ಹಟ್ಟಿ ಸಮೀಪದ ಗೊಬ್ಬರದ ಗುಂಡಿಯ ಬಳಿಯಲ್ಲಿ 20 ಲೀಟರ್ ನಷ್ಟು ಕಳ್ಳಬಟ್ಟಿ ತಯಾರಿಸುವ ಕೊಳೆ, ಕಳ್ಳಬಟ್ಟಿ ಕಾಯಿಸಲು ಬಳಸುವ ಒಂದು ಅಲುಮಿನಿಯಂ ಪಾತ್ರೆ ಎರಡು ಲೀಟರ್ ಬಾಟಲಿಯಲ್ಲಿ ಕಳ್ಳಭಟ್ಟಿ ತುಂಬಿದ ಪ್ಲಾಸ್ಟಿಕ್ ಬಾಟ್ಲಿಯನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ