ಮುಂಬೈ : ಬಾಲಿವುಡ್ ‘ನಟ ಸೈಫ್ ಅಲಿ ಖಾನ್ ಅವರ ಮೇಲೆ ಚಾಕು ದಾಳಿ ನಡೆದ 70 ತಾಸಿನ ಬಳಿಕ ದಾಳಿಕೋರನ ಬಂಧನವಾಗಿದೆ. ಬಾಂಗ್ಲಾ ದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿದ್ದ 31 ವರ್ಷದ ವ್ಯಕ್ತಿಯನ್ನು ಮುಂಬೈ ಸನಿಹದ ಥಾಣೆಯಲ್ಲಿ ಸೆರೆ ಹಿಡಿಯಲಾಗಿದ್ದು ಇದರೊಂದಿಗೆ ಪ್ರಕರಣ ತನಿಖೆಯಲ್ಲಿ ಪೊಲೀಸರಿಗೆ ಮಹತ್ವದ ಯಶಸ್ಸು ಲಭಿಸಿದೆ. ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ (30) ಬಂಧಿತ ಆರೋಪಿ
ಈತ ಭಾರತಕ್ಕೆ ಬಂದ ನಂತರ ವಿಜಯದಾಸ್ ಎಂದು ಹೆಸರು ಬದಲಿಸಿಕೊಂಡಿದ್ದ ಹಾಗೂ 5 ತಿಂಗಳಿಂದ ಮುಂಬೈಲ್ಲಿದ್ದ. ನಟನ ಮನೆಯೆಂದು ತಿಳಿಯದೇ ಕಳ್ಳತನದ ಉದ್ದೇಶದಿಂದ ಈತ ನುಗ್ಗಿದ್ದ ಎಂದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ. ಆದರೂ ಈತ ಬಾಂಗ್ಲಾದೇಶದಿಂದ ನುಸುಳಿ ಬಂದಿರುವ ಕಾರಣ ಅಂತಾರಾಷ್ಟ್ರೀಯ ಸಂಚು ದೃಷ್ಟಿಯಲ್ಲೂ ತನಿಖೆ ನಡೆಸಲಾಗುತ್ತದೆ’ ಎಂದುಪೊಲೀಸ್ ಪರ ವಕೀಲರು ಕೋರ್ಟಿಗೆ ತಿಳಿಸಿದ್ದಾರೆ. ಆದರೆ, ಆರೋಪಿ ಪರ ವಕೀಲರು, ಈತ ಬಾಂಗ್ಲಾ ನಾಗರಿಕ ಎಂಬುದಕ್ಕೆ ಯಾವುದೇ ಆಧಾರ ಇಲ್ಲ. 7 ವರ್ಷದಿಂದ ಮುಂಬೈನಲ್ಲಿದ್ದ ಎಂದಿದ್ದಾರೆ. ಆದರೂ ಮುಂಬೈ ಕೋರ್ಟು, ಆರೋಪಿಯನ್ನು ಪೊಲೀಸ್ ಜ.24ರ ವರೆಗೆ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಿದೆ.