150
ಮಣಿಪಾಲ : ಕೆಲವು ದಿನಗಳ ಹಿಂದೆ ಮಣಿಪಾಲದಲ್ಲಿ ನಡೆದ ಮಾಂಗಲ್ಯ ಸರ ಲೂಟಿ ಪ್ರಕರಣಕ್ಕೆ ಸಂಭಂಧಿಸಿದಂತೆ ಮಣಿಪಾಲ ಪೊಲೀಸರು ಸರಳೆಬೆಟ್ಟಿನ ನಿವಾಸಿ ಸಂತೋಷ್ (29 ವರ್ಷ) ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದುಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ
ಮಾ.29ರಂದು ಸಂಜೆ 5.30ಕ್ಕೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಕೆಎಂಸಿ ಆಸ್ಪತ್ರೆಯ ಸಿಬಂದಿಯನ್ನು ಹಿಂಬಾಲಿಸಿ ಕುತ್ತಿಗೆಗೆ ಕೈ ಹಾಕಿ 45 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಸಿದುಕೊಂಡಿದ್ದ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಣಿಪಾಲ ಪೊಲೀಸರ ತಂಡವು ಶ್ವಾನದಳ ನೀಡಿದ ಸುಳಿವನ್ನು ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ

