ಸುಲಿಗೆ ಪ್ರಕರಣ ಓರ್ವನ ಬಂಧನ
ಮಂಗಳೂರು : ಮಂಗಳೂರಿನ ಬೈಕಂಪಾಡಿ ರೈಲ್ವೆ ಹಳಿಯ ಬಳಿಯಲ್ಲಿ ವ್ಯಕ್ತಿಯೋರ್ವ ತನ್ನ ಪರಿಚಯದ ವ್ಯಕ್ತಿಯನ್ನು ಕರೆಸಿಕೊಂಡು ಆತನ ಕಣ್ಣಿಗೆ ಮೆಣಸಿನಕಾಯಿ ಪುಡಿಯನ್ನು ಎರಚಿ ಸುಲಿಗೆ ಮಾಡಿದ ಪ್ರಕರಣ ಪ್ರಕರಣ ದಾಖಲಾಗಿದ್ದು ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಬೈಕಂಪಾಡಿ ಪೋಲೀಸರು ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಂದ್ರೆ ನಿವಾಸಿಯಾದ ನಿಹಾಲ್ ವೈ ಸುವರ್ಣ ನನ್ನು ಬಂಧಿಸಿ ಆತನಿಂದ 35 ಸಾವಿರ ಮೌಲ್ಯದ 5.95 ಗ್ರಾಂ ಚಿನ್ನದ ಸರ ಹಾಗೂ 10,000 ಮೌಲ್ಯದ ಮೊಬೈಲ್ ಫೋನನ್ನು ಪೋಲಿಸುವ ವಶಕ್ಕೆ ಪಡೆದಿದ್ದಾರೆ ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆಯಂತೆ ಈ ಪ್ರಕರಣವನ್ನು ಕ್ಷಿಪ್ರ ಕಾರ್ಯಚರಣೆಯಲ್ಲಿ ಬೈಕಂಪಾಡಿ ಭೇದಿಸಿದ್ದಾರೆ
ಪೊಲೀಸ್ ಆಯುಕ್ತರಾದ ಶ್ರೀ ಕುಲದೀಪ್ ಕುಮಾರ್ ಆರ್ ಜೈನ್ ಇವರ ನಿರ್ದೇಶನದಂತೆ ಮಂಗಳೂರು ಪೊಲೀಸ್ ಉಪಯುಕ್ತರಾದ ಅಂಶುಕುಮಾರ್ ಹಾಗೂ ದಿನೇಶ್ ಕುಮಾರ್ ಬಾರಿಕೆ ಮತ್ತು ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಮನೋಜ್ ಕುಮಾರ್ ಇವರ ನೇತೃತ್ವದಲ್ಲಿ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕರಾದ ಸೋಮಶೇಖರ್ ಜೆ ಸಿ ಪೊಲೀಸ್ ಉಪನಿರೀಕ್ಷಕ ರಾದ ಕುಮಾರಸ್ವಾಮಿ ಮತ್ತು ಕುಮಾರೇಶನ್ ಹಾಗೂ ಪಣಂಬೂರು ಪೊಲೀಸ್ ಠಾಣಾ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ