ಚಿನ್ನಾಭರಣ ಕಳವು : ಆರೋಪಿಯ ಬಂಧನ
ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಬಂದ ಭಕ್ತಾದಿಯ ಪತ್ನಿಯ ಕೈಯಲ್ಲಿದ್ದ ವ್ಯಾನಿಟಿ ಬ್ಯಾಗಿನಿಂದ ಚಿನ್ನಾಭರಣ ಕಳವು ಮಾಡಿದ ಆರೋಪಿಯಾದ ತೀರ್ಥಹಳ್ಳೀ ನಿವಾಸಿ ಬಿ ಜೆ ಗಿರೀಶ್ (34) ಎಂಬಾತನನ್ನು ಕೊಲ್ಲೂರು ಪೊಲೀಸರು ಬಂಧಿಸಿದ್ದಾರೆ
ಜೂನ್ 4 ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಬಂದ ಪ್ರವೀಣ ಕಾಸರಗೋಡು ಎಂಬವರ ಪತ್ನಿಯ ಕೈಯಲ್ಲಿದ್ದ ವ್ಯಾನಿಟಿ ಬ್ಯಾಗಿನಿಂದ ಸುಮಾರು 108 ಗ್ರಾಂ ಚಿನ್ನದ ವಿವಿಧ ಅಭರಣ ಕಳುವಾಗಿರುವ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು
ಆರೋಪಿತನಿಂದ 59 ಗ್ರಾಂ ತೂಕದ ಚಿನ್ನದ ಚೈನ್-1, 20 ಗ್ರಾಂ ತೂಕದ ಚಿನ್ನದ ಬಳೆಗಳು – 2, 09 ಗ್ರಾಂ ತೂಕದ ಚಿಕ್ಕ ಚಿನ್ನದ ಚೈನ್-1, 06 ಗ್ರಾಂ ತೂಕದ ಚಿನ್ನದ(Baby) ಬಳೆ-1, ಚಿನ್ನದ ಕಿವಿಯೋಲೆ – 4 ಜೊತೆ ವಶಪಡಿಸಿಕೊಳ್ಳಲಾಗಿದೆ. ಚಿನ್ನಾಭರಣಗಳ ಒಟ್ಟು ತೂಕ 108.00 ಗ್ರಾಂ, ಚಿನ್ನಾಭರಣಗಳ ಅಂದಾಜು ಮೌಲ್ಯ 4,75000/- ಆಗಿರುತ್ತದೆ
ಕುಂದಾಪುರ ಪೊಲೀಸ್ ಉಪಾಧೀಕ್ಷಕರಾದ ಕೆ ಯು ಬೆಳ್ಳಿಯಪ್ಪ ನವರ ಮಾರ್ಗದರ್ಶನದಲ್ಲಿ ಬೈಂದೂರು ನಿರೀಕ್ಷಕರಾದ ಸಂತೋಷ್ ಕಾಯ್ಕಿಣಿ ಯವರ ನೇತೃತ್ವದಲ್ಲಿ ಕೊಲ್ಲೂರು ಉಪ ನಿರೀಕ್ಷಕರಾದ ಕುಮಾರಿ ಸುಧಾರಾಣಿ ಟಿ ಹಾಗೂ ಸಿಬ್ಬಂದಿಯವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು