151
ತ್ರಿಶೂರು : ಇ.ಡಿ. ಅಧಿಕಾರಿಯಂತೆ ನಟಿಸಿ ಬಂಟ್ವಾಳದ ಉದ್ಯಮಿಯೊಬ್ಬರ ಮನೆಯನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇರಳ ಪೊಲೀಸರು ಸೋಮವಾರ ಸಹಾಯಕ ಸಬ್ ಇನ್‌ಸ್ಪೆಕ್ಟರ್‌ನನ್ನು ಅಮಾನತುಗೊಳಿಸಿದ್ದಾರೆ. ತ್ರಿಶೂರ್‌ನ ಕೊಡುಂಗಲ್ಲೂರು ಠಾಣೆಯ ಎಎಸ್‌ಐ ಶಹೀರ್‌ಬಾಬು (49) ಅಮಾನತುಗೊಂಡಿದ್ದಾರೆ.
ಜ.3 ರಂದು ಬಂಟ್ವಾಳ ತಾಲೂಕಿನ ಬೋಳಂತೂರು ನಾರ್ಶದ ಬೀಡಿ ಉದ್ಯಮಿ ಸುಲೈಮಾನ್ ಹಾಜಿ ಮನೆ ಮೇಲೆ ದಾಳಿ ನಡೆಸಿ ದರೋಡೆ ನಡೆಸಲಾಗಿತ್ತು. ತನಿಖೆ ವೇಳೆ ಪ್ರಕರಣದ ರೂವಾರಿ ಶಹೀರ್‌ಬಾಬು ಎಂಬುದು ಪತ್ತೆಯಾಗಿತ್ತು. ಆತ ನಕಲಿ ತಂಡವನ್ನು ಕಟ್ಟಿದ್ದು, ಆತನ ಯೋಜನೆಯಂತೆ ದರೋಡೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಶಹೀರ್ ಸೇರಿ ನಾಲ್ವರನ್ನು ವಿಟ್ಲ ಪೊಲೀಸರು ಬಂಧಿಸಿದ್ದರು.

