192
ಕುಂದಾಪುರ : ಕುಂದಾಪುರ ಖಾರ್ವಿಕೇರಿಯ ರಿಂಗ್ ರೋಡ್‌ನಲ್ಲಿ ಹೊಳೆಯಿಂದ ಮರಳನ್ನು ತೆಗೆದು ಚೀಲಕ್ಕೆ ತುಂಬಿಸಿ ಗೂಡ್ಸ್ ರಿಕ್ಷಾದಲ್ಲಿ ಸಾಗಾಟ ಮಾಡಲು ತಯಾರಿ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದ ಕುಂದಾಪುರ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ಸುರೇಶ ಎಂ., ನಿಂತಿದ್ದ ಗೂಡ್ಸ್ ರಿಕ್ಷಾ ಪರಿಶೀಲಿಸಿದಾಗ ರಿಕ್ಷಾದೊಳಗೆ ಸುಮಾರು 35 ಪಾಲಿಥಿನ್ ಸಿಮೆಂಟ್ ಚೀಲದಲ್ಲಿ ಮರಳನ್ನು ತುಂಬಿಸಿ ಇಟ್ಟಿರುವುದು ಕಂಡು ಬಂದಿದೆ.
ಮರಳು ಸಾಗಾಟ ಮಾಡುತ್ತಿದ್ದ ಗೂಡ್ಸ್ ರಿಕ್ಷಾ ಮತ್ತು ಮರಳನ್ನು ವಶಪಡಿಸಿಕೊಳ್ಳಲಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

