Home » ನಕಲಿ ದಾಖಲೆ ಪತ್ರ ನೀಡಿ 20 ಲಕ್ಷ ವಂಚನೆ
 

ನಕಲಿ ದಾಖಲೆ ಪತ್ರ ನೀಡಿ 20 ಲಕ್ಷ ವಂಚನೆ

ಹಂಗಳೂರಿನ ಜ್ಯೂ-ಲಿಯೊ ಫ್ಲ್ಯಾಟ್

by Kundapur Xpress
Spread the love

ಕುಂದಾಪುರ : ಕುಂದಾಪುರ ನಗರದ ಸಮೀಪದಲ್ಲಿರುವ ಹಂಗಳೂರಿನ ಜ್ಯೂ-ಲಿಯೊ ರೆಸಿಡೆನ್ಸಿಯಲ್ಲಿರುವ ಫ್ಲ್ಯಾಟ್‌ನ ನಕಲಿ ದಾಖಲೆ ಪತ್ರಗಳನ್ನು ನೀಡಿ ಬಡಗಬೆಟ್ಟು ಕ್ರೆಡಿಟ್‌ ಕೋ-ಅಪರೇಟಿವ್‌ ಸೊಸೈಟಿ ಲಿಮಿಟೆಡ್‌ನ ಮಣಿಪಾಲ ಶಾಖೆಯಲ್ಲಿ ವಂಚನೆ ಎಸಗಿದ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಕುಂದಾಪುರ ತಾಲೂಕು ಕೋಟೇಶ್ವರ ಗ್ರಾಮ ಪಂಚಾಯತ್‌ಗೆ ಸೇರಿದ ಸರ್ವೇ ನಂಬರ್‌ 333/2P5 ರಲ್ಲಿ ನಿರ್ಮಿಸಿರುವ ಜ್ಯೂ-ಲಿಯೋ ರೆಸಿಡೆನ್ಸಿ ಕಟ್ಟಡದ ನೆಲ ಅಂತಸ್ತಿನಲ್ಲಿರುವ ಜಾಗವು ಸಂಪೂರ್ಣ ತನ್ನ ಮಾಲೀಕತ್ವದ್ದು, ಎಂದು ನಂಬಿಸಿ 308.82 ಚದರ ಮೀಟರ್‌ ವಿಸ್ತೀರ್ಣದ ಪ್ಲಾಟ್‌ನ (ಡೋರ್‌ ನಂ: 3-315/10, ಫ್ಲಾಟ್‌ ನಂ.07) ದಾಖಲೆ ಪತ್ರಗಳನ್ನು ನೀಡಿ ಮಹಮ್ಮದ್‌ ಶಾಕೀರ್‌ ಎಂಬವರು 20 ಲಕ್ಷ ಹಣವನ್ನು ಸಾಲವಾಗಿ ಪಡೆದಿದ್ದು, ಸಾಲಕ್ಕೆ ಅಬ್ದುಲ್‌ ನಾಸಿರ್‌  ಅನ್ವರ್‌ ಹುಸೇನ್‌,ಹಾಗೂ ಹಸೀನಾ ಬಾನು ಜಾಮೀನುದಾರರಾಗಿದ್ದಾರೆ.

ಆರೋಪಿ ಮಹಮ್ಮದ್‌ ಶಾಕೀರ್‌ ಅಸಲಿ ದಾಖಲೆ ಪತ್ರಗಳನ್ನುಕುಂದಾಪುರದ ಮಹಾಲಕ್ಷ್ಮೀ ಕ್ರೆಡಿಟ್‌ ಕೋ ಅಪರೇಟಿವ್‌ ಬ್ಯಾಂಕ್‌ಗೆ ನೀಡಿ ಅಲ್ಲಿಂದ 55 ಲಕ್ಷ ಸಾಲವನ್ನು ಪಡೆದಿದ್ದು ಬಡಗಬಟ್ಟು ಕ್ರೆಡಿಟ್‌ ಕೋ-ಅಪರೇಟಿವ್‌ ಸೊಸೈಟಿಗೆ ಮೋಸ, ವಂಚನೆ ಮಾಡುವ ಉದ್ದೇಶದಿಂದ ಮಹಾಲಕ್ಷ್ಮೀ ಕ್ರೆಡಿಟ್‌ ಕೋ ಅಪರೇಟಿವ್‌ ಬ್ಯಾಂಕ್‌ ಕುಂದಾಪುರಕ್ಕೆ ನೀಡಿದ ಅಸಲಿ ದಾಖಲೆ ಪತ್ರಗಳನ್ನು ನಕಲಿ ಮಾಡಿ ನಕಲಿ ದಾಖಲೆ ಪತ್ರಗಳು ಅಸಲಿ ದಾಖಲೆ ಪತ್ರಗಳು ಎಂದು ಬ್ಯಾಂಕ್‌ ಅಧಿಕಾರಿಯವರ ಮುಂದೆ ಹಾಜರುಪಡಿಸಿ ಸಾಲ ಪಡೆದುಕೊಂಡು ವಂಚಿಸಿರುವುದಾಗಿ ಬಡಗಬಟ್ಟು ಕ್ರೆಡಿಟ್‌ ಕೋ-ಅಪರೇಟಿವ್‌ ಸೊಸೈಟಿ ವ್ಯವಸ್ಥಾಪಕರಾದ ನವೀನ ಕೆ ಎಂಬವರು ದೂರು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

   

Related Articles

error: Content is protected !!