Home » ಅಕ್ರಮ ಗೋಮಾಂಸ ಸಾಗಾಟ : ಪೊಲೀಸ್‌ ದಾಳಿ
 

ಅಕ್ರಮ ಗೋಮಾಂಸ ಸಾಗಾಟ : ಪೊಲೀಸ್‌ ದಾಳಿ

by Kundapur Xpress
Spread the love

ಭಟ್ಕಳ : ನಗರ ಠಾಣೆಯ ಪೊಲೀಸರು ದಾಳಿ ಮಾಡಿ ಆಟೋವೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋಮಾಂಸ ಹಾಗೂ ಅಟೋವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಸರಕೇರಿ ಕೆರೆಗದ್ದೆ ಮಹಾಸತಿ ದೇವಸ್ಥಾನ ಸಮೀಪ ಈ ದಾಳಿ ನಡೆದಿದ್ದು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು ಘಟನೆಯಲ್ಲಿ ಒಟ್ಟು 168 ಕೆಜಿ ಗೋಮಾಂಸ ವಶಕ್ಕೆ ಪಡೆಯಲಾಗಿದೆ.

ಪರಾರಿಯಾದ ಆರೋಪಿಗಳನ್ನು ಎ ಡಿ ಅಶ್ವಾಕ್, ಶಾಹೀದ್, ಶಾಕೀರ ಮಹಮ್ಮದ್ ಎಂದು ಗುರುತಿಸಲಾಗಿದೆ. ಇವರು ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಎಲ್ಲಿಂದಲೋ ದನಗಳನ್ನು ಕಳುವು ಮಾಡಿಕೊಂಡು ಬಂದು ಅವುಗಳನ್ನು ಕಟಾವು ಮಾಡಿ ಮಾಂಸವನ್ನು ಐದು ಸಿಮೆಂಟ್ ಚೀಲಗಳಲ್ಲಿ ತುಂಬಿಕೊಂಡು ಆಟೊ ರಿಕ್ಷಾದಲ್ಲಿ ಹಾಕಿಕೊಂಡು ಸಾಗಿಸುತ್ತಿದ್ದರು.

ಪಿ ಎಸ್ ಐ ತಿಮ್ಮಪ್ಪ ಎಸ್ ರವರು ಆಸರಕೇರಿ ಕೆರೆಗದ್ದೆ ಮಾಹಾಸತಿ ದೇವಸ್ಥಾನದ ಸಮೀಪ ದಾಳಿ ಮಾಡಿದ ವೇಳೆ ಆರೋಪಿಗಳು ಆಟೋರಿಕ್ಷಾ ಹಾಗೂ ಅದರಲ್ಲಿಯ ಮಾಂಸವನ್ನು ಬಿಟ್ಟು ಪರಾರಿಯಾಗಿದ್ದಾರೆ.ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   

Related Articles

error: Content is protected !!