ಹೊನ್ನಾಳಿ : ಮೈಕ್ರೋ ಫೈನಾನ್ಸ್ ಸಾಲಬಾಧೆ ತಾಳಲಾಗದೆ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಮಠದ ಬಳಿ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿ ದ್ದಾರೆನ್ನಲಾದ ಹೊನ್ನಾಳಿ ದುರ್ಗಿಗುಡಿ ನಿವಾಸಿ, ಶಿಕ್ಷಕಿ ಪುಷ್ಪಲತಾ (46) ಶವ ಮಂಗ ಳವಾರ ಪತ್ತೆಯಾಗಿದೆ. ರಾಣೆಬೆನ್ನೂರು ತಾಲೂಕಿನ ತುಮ್ಮಿನಕಟ್ಟೆ ಸರ್ಕಾರಿ ಶಾಲೆ ಯಲ್ಲಿ ಶಿಕ್ಷಕಿಯಾಗಿದ್ದ ಪುಷ್ಪಲತಾ, ಭಾನುವಾರ ಮಧ್ಯಾಹ್ನದಿಂದ ಕಾಣೆಯಾಗಿದ್ದರು. ಅವರ ಚಪ್ಪಲಿ ಮತ್ತು ಬ್ಯಾಗ್ ತುಂಗಭದ್ರಾ ನದಿ ದಡದಲ್ಲಿ ಕಂಡು ಬಂದಿತ್ತು.
ಮೃತ ಪುಷ್ಪಲತಾ ಪತಿ ಹಾಲೇಶ್ ರಟ್ಟಿಹಳ್ಳಿ ತಾಲೂಕಿನ ಕಿರೆಗೆರೆ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಹೊನ್ನಾಳಿಯಲ್ಲಿ ಮನೆ ನಿರ್ಮಾಣ, ಮಕ್ಕಳ ವಿದ್ಯಾ ಭ್ಯಾಸಕ್ಕಾಗಿ ಈ ಶಿಕ್ಷಕ ದಂಪತಿ ಸುಮಾರು 30 – 40 ಲಕ್ಷಗಳನ್ನು ವಿವಿಧ ಖಾಸಗಿ ಫೈನಾನ್ಸ್ಗಳಿಂದ ಸಾಲ ಪಡೆದಿದ್ದರು ಎನ್ನಲಾಗಿದೆ