94
ಕುಂದಾಪುರ : ಕೆಲವು ದಿನಗಾಳ ಹಿಂದೆ ಬೆಳಗ್ಗಿನ ಜಾವ ನಾಡ ಗ್ರಾಮದಲ್ಲಿ ಬೀಡಾಡಿ ದನಗಳನ್ನು ಕಳವಿಗೆ ಯತ್ನಿಸಿದ್ದ ಆರೋಪಿಗಳನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ. ನೌಫಲ್ ಬೈಕಾಡಿ(23) ಬ್ರಹ್ಮಾವರ ತಾಲೂಕು ಹಾಗೂ ನಿಶಾದ್ (23) ಮಾವಿನಕಟ್ಟೆ ಬಂಧಿತರು. ನಾಡಾ ಗ್ರಾಮದ ಶಾನ್ ಮೆಡಿಕಲ್ ಪಕ್ಕದಲ್ಲಿ ಮಲಗಿರುವ ದನಗಳನ್ನು ಕಾರಿಗೆ ತುಂಬಲು ಪ್ರಯತ್ನಿಸುವ ವೇಳೆ ದಾರಿಯಲ್ಲಿನ ವಾಹನವನ್ನು ನೋಡಿ ದನವನ್ನು ತುಂಬಿಸಲು ಪ್ರಯತ್ನಿಸಿದವರು ಓಡಿ ಹೋಗಿದ್ದರು.
ಗಂಗೊಳ್ಳಿ ಪೊಲೀಸ್ ಠಾಣೆಯ ವಿಶೇಷ ತಂಡ ಆರೋಪಿಗಳನ್ನು ಬಂಧಿಸಿದೆ ಆರೋಪಿಗಳಿಂದ ಕಾರು, ಮೊಬೈಲ್ ಸ್ವಾಧೀನಪಡಿಸಿಕೊಳ್ಳಲಾಗಿದೆ.

