ಬೆಂಗಳೂರು: ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಇಬ್ಬರು ಪ್ರಮುಖ ಆರೋಪಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಪಶ್ಚಿಮ ಬಂಗಾಳದಲ್ಲಿ ಶುಕ್ರವಾರ ಬಂಧಿಸಿದೆ.
ಬಾಂಬರ್ ಮುಸ್ಸಾವೀರ್ ಹುಸೇನ್ ಶಾಜಿಬ್ ಮತ್ತು ಸಂಚುಕೋರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಅಬ್ದುಲ್ ಮತೀನ್ ಅಹ್ಮದ್ ತಾಹಾನನ್ನು ಕೋಲ್ಕತಾದ ಪುರ್ಬಾ ಮೇದಿನಿಪುರ್ ನಿಂದ ಎನ್ ಐ ಎ ನಿನ್ನೆ ಬಂಧಿಸಿದೆ
ಆರೋಪಿ ಮುಸ್ಸಾವೀರ್ ಶಾಜಿಬ್ ಕೆಫೆಯಲ್ಲಿ ಬಾಂ ಇರಿಸಿದ್ದವನು ಹಾಗೂ ಅಬ್ದುಲ್ ಮತೀನ್ ತಾಹಾ ಯೋಜನೆ ಮತ್ತು ಸ್ಫೋಟ ಕಾರ್ಯಗತಗೊಳಿಸುವಿಕೆಯ ರೂವಾರಿಯಾಗಿದ್ದ ಇವರ ಪತ್ತೆಗಾಗಿ ಬಲೆ ಬೀಸಿದ್ದ ಎನ್‌ಐಎ ಅಧಿಕಾರಿಗಳು, ನಗರದೆಲ್ಲೆಡೆ ಕಾರ್ಯಾಚರಣೆ ಕೈಗೊಂಡಿದ್ದರು. ಕೃತ್ಯದ ಬಳಿಕ ಆರೋಪಿಗಳು ಬಸ್‌ನಲ್ಲೇ ಪ್ರಯಾಣಿಸಿದ್ದರು ನಂತರ ಆಸ್ಲಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಈ ಇಬ್ಬರನ್ನು ಕೊನೆಗೂ ಕೋಲ್ಕತ್ತಾದಲ್ಲಿ ಎನ್‌ಐಎ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಮೇಶ್ವರಂ ಕೆಫೆಯಲ್ಲಿ ಸ್ಫೋಟದ ನಂತರ ಆರೋಪಿ ಗೊರಗುಂಟೆಪಾಳ್ಯದ ಮೂಲಕ ತುಮಕೂರು ತಲುಪಿ, ಬಳಿಕ ಬಳ್ಳಾರಿಯ ಮುಖಾಂತರ ಕಲಬುರಗಿಗೆ ಪ್ರಯಾಣಿಸಿದ್ದಾನೆ. ಬಳಿಕ ಆಂಧ್ರಪ್ರದೇಶದ ನೆಲ್ಲೂರಿಗೆ ಬಸ್‌ನಲ್ಲೇ ತಲುಪಿದ್ದು, ಸಂತರ ಒಡಿಶಾ ಮೂಲಕವಾಗಿ ಪಶ್ಚಿಮ ಬಂಗಾಳಕ್ಕೆ ತೆರಳಿರುವ ಮಾಹಿತಿ ಇದೆ