110
ಕುಂದಾಪುರ : ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಅರಾಟೆಯ ಬಳಿಯ ಮೂವತ್ತುಮುಡಿ ಸೇತುವೆ ಬಳಿ ಬಸ್ ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿದೆ.
ಕೆ ಎಸ್ ಆರ್ ಟಿ ಸಿ ಬಸ್ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು ಬಸ್‌ನಲ್ಲಿದ್ದ 6 ಮಂದಿ ಗಾಯಗೊಂಡಿದ್ದಾರೆ
ಬೈಂದೂರು ಕಡೆಗೆ ಸಾಗುತ್ತಿದ್ದ ಬಸ್ ಸೇತುವೆ ಬಳಿ ತಲುಪಿದಾಗ ಎದುರಿ ನಿಂದ ವೇಗವಾಗಿ ಬಂದ ಲಾರಿ ಢಿಕ್ಕಿ ಹೊಡೆಯಿತು. ಬಸ್ಸಿನಲ್ಲಿದ್ದ ರಿಹಾನ (37), ಖುರೈಶಾ (36), ಶಾಮಿನ್ (40) ಮತ್ತು ಆಸೀಫಿಯಾ (21) ಗಾಯಗೊಂಡಿದ್ದು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಶಾ (20) ಹಾಗೂ ಆಶ್ರಿತಾ (20) ಸಣ್ಣ ಪುಟ್ಟಗಾಯಗೊಂಡಿದ್ದು, ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ
ಅಪಘಾತದಿಂದಾಗಿ ರಸ್ತೆ ಸಂಚಾರಕ್ಕೆ ತಡೆಯುಂಟಾಗಿದ್ದು ಪೊಲೀಸರು ಹಾಗೂ ಸಾರ್ವಜನಿಕರ ಸಹಾಯದಿಂದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

