Home » ಕುತ್ತಿಗೆಯಿಂದ ಸರ ಎಗರಿಸಿ ಪರಾರಿ
 

ಕುತ್ತಿಗೆಯಿಂದ ಸರ ಎಗರಿಸಿ ಪರಾರಿ

by Kundapur Xpress
Spread the love

ಕಾರ್ಕಳ : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಘಟನೆ ಕಾರ್ಕಳದ ಕಾಂತಾವರದಲ್ಲಿ ನಡೆದಿದೆ.

ಗೋಪಿ ಎಂಬವರು ಕಾಂತೇಶ್ವರ ದೇವಸ್ಥಾನದಿಂದ ಮನೆಗೆ ಅಂಬರೀಶ ಗುಹೆ ಸಮೀಪ ಹಾದು ಹೋಗುವ ಬಾರಾಡಿ-ಕಾಂತವರ ಸಂಪರ್ಕಿಸುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಬಾರಾಡಿ ಕಡೆಯಿಂದ ಬೈಕ್‌ನಲ್ಲಿ ಬಂದ ಓರ್ವ ದಾರಿ ಕೇಳುವ ನೆಪದಲ್ಲಿ ಗೋಪಿ ಧರಿಸಿದ್ದ ಚಿನ್ನದ ಚೈನ್ ಎಳೆದುಕೊಂಡು ಹೋಗಿದ್ದಾನೆ.

ಈ ಸಂದರ್ಭ ಚೈನ್‌ ಒಂದು ತುಂಡು ಗೋಪಿ ಅವರ ಕೈಯಲ್ಲಿ ಉಳಿದಿದ್ದು, ಕಳ್ಳ ಎಗರಿಸಿದ ಚಿನ್ನದ ಮೌಲ್ಯ 1,20,000 ರು. ಆಗಿದೆ. ಚಿನ್ನ ಎಗರಿಸುವಾಗ ಕಳ್ಳ ಬಲವಾಗಿ ತಳ್ಳಿದ ಪರಿಣಾಮ ಗೋಪಿಯವರು ಗಾಯಗೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ

 

Related Articles

error: Content is protected !!