Home » ದೂರು ಸ್ವೀಕಾರಕ್ಕೆ ನಕಾರ : ಠಾಣೆ ಎದುರೇ ಆತ್ಮಹತ್ಯೆ
 

ದೂರು ಸ್ವೀಕಾರಕ್ಕೆ ನಕಾರ : ಠಾಣೆ ಎದುರೇ ಆತ್ಮಹತ್ಯೆ

by Kundapur Xpress
Spread the love

ಹೊಳಲ್ಕೆರೆ : ಓಡಿ ಹೋದ ಪುತ್ರಿಯನ್ನು ಹುಡುಕಿಕೊಡುವಂತೆ ನೀಡಿದ ದೂರನ್ನು ಪೊಲೀಸರು ನಿರ್ಲಕ್ಷಿಸಿದರು ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪೊಲೀಸ್ ಠಾಣೆಯ ಎದುರು ಆತ್ಮಹತ್ಯೆಗೆ ಯತ್ನಿಸಿ ಮೃತಪಟ್ಟಿದ್ದಾರೆ. ಮೃತರು ಗಿಲೆನಹಳ್ಳಿ ಗ್ರಾಮದ ನಿವಾಸಿ ಅಜ್ಜಯ್ಯ ಎಂಬ 45 ವರ್ಷದ ವ್ಯಕ್ತಿ.

ಇವರ ಪುತ್ರಿ ಅಪ್ತಾಪ್ತಿಯಾಗಿದ್ದು, ಅನ್ಯ ಜಾತಿಯ ಯುವಕ ನೊಂದಿಗೆ ವಾರದ ಹಿಂದೆ ಓಡಿ ಹೋಗಿದ್ದರು ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ದೂರು ಪಡೆಯಲಿಲ್ಲ ಎಂದು ಭಾನುವಾರ ಪೊಲೀಸ್ ಠಾಣೆ ಎದುರು ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಅವರನ್ನು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ನಡೆಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಜ್ಜಯ್ಯ ಮೃತಪಟ್ಟಿದ್ದಾರೆ. ಮೃತನ ಕಡೆಯವರು ಶವವನ್ನು ಠಾಣೆ ಎದುರು ಇರಿಸಿ ಪೋಲೀಸರ ವಿರುದ್ಧ ಪ್ರತಿಭಟಿಸಿದರು. ಕೊನೆಗೆ ಪೊಲೀಸರು ಲಾಠಿ ಚಾರ್ಜ್ ಮಾಡಿ ಪ್ರತಿಭಟನಾಕಾರರನ್ನು ಚದುರಿಸಿದರು.

 

Related Articles

error: Content is protected !!