ಯುವಕ ನಾಪತ್ತೆ
ಕುಂದಾಪುರ: ಹಾರ್ದಳ್ಳಿ- ಮಂಡಳ್ಳಿ ಗ್ರಾಮದ ಜನ್ನಾಡಿ ವಿಶ್ವನಾಥ್ ಅವರ ಪುತ್ರ ಪ್ರಶಾಂತ್ (28ವರ್ಷ) ನಾಪತ್ತೆಯಾಗಿದ್ದಾನೆ ಅಂಗಡಿ ವ್ಯವಹಾರ ಮಾಡಿಕೊಂಡಿರುವ ಅವರು ಅನಾರೋಗ್ಯ ನಿಮಿತ್ತ ಮೂರು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮಾ.29 ರಂದು ಬೆಳಗ್ಗೆ ಮನೆಯಿಂದ ಬೆಂಗಳೂರಿಗೆ ಹೋಗುವುದಾಗಿ ತಿಳಿಸಿ ಹೊರಟಿದ್ದು, ನಂತರ ನಾಪತ್ತೆಯಾಗಿದ್ದಾರೆ. ಹುಡುಕಾಡಿದರು ಪತ್ತೆಯಾಗಿಲ್ಲ ಎಂದು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಳು ಅಕ್ರಮ ಸಾಗಾಟ
ಕುಂದಾಪುರ: ಅಂಪಾರು ಗ್ರಾಮದಿಂದ ಕಣ್ಣೂರು ಕಡೆಗೆ ಅಕ್ರಮವಾಗಿ ಮರಳು ತುಂಬಿಸಿಕೊಂಡು ಬರುತ್ತಿದ್ದ ಟಿಪ್ಪರ್ ನ್ನು ಗ್ರಾಮಾಂತರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿ ರಾಮಚಂದ್ರ ಎಂಬಾತ ಯಾವುದೇ ಪರವಾನಗಿ ಹೊಂದಿರದೆ ಮರಳು ಸಾಗುಟ ಮಾಡುತ್ತಿದ್ದ ಎನ್ನಲಾಗಿದೆ 3 ಯೂನಿಟ್ ಮರಳು ಸಹಿತ ವಾಹನ ವಶಕ್ಕೆ ತೆಗೆದುಕೊಳ್ಳಲಾಗಿದ್ದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಮಗುಚಿ ಗಂಭೀರ ಗಾಯ
ಬೈಂದೂರು : ಶಿರೂರು ಕೆಳಪೇಟೆ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಯಿ ಅಡ್ಡ ಬಂದ ಪರಿಣಾಮ ಬೈಕ್ ಮಗುಚಿದ ಸವಾರ ಮಾಸ್ತಪ್ಪ ಎಂಬವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ ಗಾಯಾಳುವನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ತವ್ಯಕ್ಕೆ ಅಡ್ಡಿ: ಪ್ರಕರಣ ದಾಖಲು
ಕೋಟ : ಶಿರಿಯಾರ ಗ್ರಾಮದ ದೇವರೈಸ್ ಇಂಡಸ್ಟ್ರೀಸ್‌ನಲ್ಲಿ ಅಕ್ರಮ ಅಕ್ಕಿ ಸಂಗ್ರಹಣೆ ಮಾಹಿತಿ ಮೇರೆಗೆ ತೆರಳಿದ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಟ ಹೋಬಳಿಯ ಕಂದಾಯ ನಿರೀಕ್ಷಕ ಮಂಜುನಾಥ್ ಅವರು ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆ ಕುಂದಾಪುರ ಆಹಾರ ನಿರೀಕ್ಷಕ ಸುರೇಶ್, ಜೀಪು ಚಾಲಕ ಕಿರಣ್ ಅವರೊಂದಿಗೆ ರೈಸ್ ಮಿಲ್ ಗೆ ಹೋಗಿದ್ದರು. ಈ ಸಂದರ್ಭ ಆರೋಪಿ ಪ್ರಭಾಕರ್ ಎಂಬವರು ಜಿಪಿಎಸ್ ಫೋಟೊ ತೆಗೆಯುತ್ತಿದ್ದ ವೇಳೆ ಮೊಬೈಲ್ ಕಸಿದು ಕೊಂಡು ಕಂದಾಯ ನಿರೀಕ್ಷಕ ಮಂಜುನಾಥ್ ಅವರನ್ನು ದೂಡಿ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.