ಉಡುಪಿ :ಜಿಲ್ಲೆಯ ನಾನಾ ಠಾಣೆಗಳ ವ್ಯಾಪ್ತಿಯಲ್ಲಿ ಸಮಾಜಘಾತುಕ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದ ಇಬ್ಬರು ಆರೋಪಿಗಳನ್ನು ಪೊಲೀಸರು ಗೂಂಡಾ ಕಾಯ್ದೆ ಅಡಿ ಬಂಧಿಸಿದ್ದಾರೆ ಮುಂಬರುವ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾನೂನು ಸು ವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವುದರಿಂದ ಜಿಲ್ಲಾಧಿಕಾರಿಯವರ ಆದೇಶದಂತೆ ಉಡುಪಿ ಹತ್ತಿರ ಅತ್ರಾಡಿ ನಿವಾಸಿಯಾದ ಸೈಫ್ ಉದ್ದಿನ್ ಯಾನೆ ಸೈಫು ಹಾಗೂ ಬೈಂದೂರು ಬಳಿಯ ಉಪ್ಪುಂದದ ರವಿ ಯಾನೆ ರವಿಚಂದ್ರ ಎಂಬವರನ್ನು ಬಂಧಿಸಿ ಕಾರ ಗ್ರಹಕ್ಕೆ ಕಳಿಸಿದ್ದಾರೆ ಉಪ್ಪುಂದದ ರವಿಚಂದ್ರ ನನ್ನು ಕಲ್ಬುರ್ಗಿಯ ಕೇಂದ್ರ ಕಾರಾಗೃಹ ಹಾಗೂ ಅತ್ರಾಡಿಯ ಸೈಫ್ ಉದ್ದಿನ್ ಎಂಬಾತನನ್ನು ಬೆಳಗಾವಿಯ ಕೇಂದ್ರ ಕಾರ ಗ್ರಹದ ಬಂಧನದಲ್ಲಿ ಇಡಲಾಗಿದೆ ರವಿಚಂದ್ರ ವಿರುದ್ಧ 21 ಪ್ರಕರಣಗಳು ಸೈಫ್ ಉದ್ದಿನ್ ವಿರುದ್ಧ 19 ಪ್ರಕರಣಗಳು ದಾಖಲಾಗಿದೆ.