Home » ಪೆಟ್ರೋಲ್ ಬಂಕ್‌ನ ಸೇಲ್ಸ್‌ಮೆನ್‌ ಮೇಲೆ ಹಲ್ಲೆ
 

ಪೆಟ್ರೋಲ್ ಬಂಕ್‌ನ ಸೇಲ್ಸ್‌ಮೆನ್‌ ಮೇಲೆ ಹಲ್ಲೆ

by Kundapur Xpress
Spread the love

ಕುಂದಾಪುರ : ಕರ್ಕುಂಜೆ ಗ್ರಾಮದ ನೆಂಪು ಸೌಪರ್ಣಿಕಾ ಪೆಟ್ರೋಲ್ ಬಂಕ್‌ ನಲ್ಲಿ ಸೇಲ್ಸ್‌ ಮೆನ್ ಆಗಿ ಕೆಲಸ ಮಾಡಿಕೊಂಡಿರುವ ಹಾವೇರಿ ಜಿಲ್ಲೆಯ ಕೆಂಚಪ್ಪ(20) ಎಂಬವರ ಮೇಲೆ ರಾಘವೇಂದ್ರ ಮತ್ತು ಶಬರೀಶ ಎಂಬವರು ಬೈಕ್‌ನಲ್ಲಿ ಆಗಮಿಸಿ ಹಲ್ಲೆ ನಡೆಸಿದ ಬಗ್ಗೆ ಪ್ರಕರಣ ದಾಖಲಾಗಿದೆ

100ರೂ. ಪೆಟ್ರೋಲ್ ಹಾಕುವಂತೆ ಹೇಳಿದ್ದು ಅದರಂತೆ ಪೆಟ್ರೋಲ್ ಹಾಕಿ ಹಣ ಕೇಳಿದಾಗ ನೀನು ಪೆಟ್ರೋಲ್ ಹಾಕಿಲ್ಲ, ಹಣ ಕೊಡುವುದಿಲ್ಲ ಎಂದಿದ್ದಾರೆ. ಈ ವಿಷಯವನ್ನು ಹತ್ತಿರದಲ್ಲೇ ಇದ್ದ ಸಹ ಕೆಲಸಗಾರರಾದ ಹರ್ಷ ಮತ್ತು ದರ್ಶನ ಎಂಬವರ ಹತ್ತಿರ ಹೇಳಲು ಹೋಗುವಾಗ ಇಬ್ಬರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಾಗಿದೆ

   

Related Articles

error: Content is protected !!