ಹಾವು ಕಡಿತ: ವ್ಯಕ್ತಿ ಸಾವು
ಹಾವು ಕಡಿತದಿಂದ ವ್ಯಕ್ತಿ ಮೃತಪಟ್ಟ ಘಟನೆ ಶಂಕರನಾರಾಯಣ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಶೌಡಕಲ್ಲು ಎಂಬಲ್ಲಿ ಶಿವರಾಮ ಎಂಬವರು ತೋಟದಲ್ಲಿ ಕೆಲಸ ಮಾಡುತ್ತಿರುವ ವೇಳೆ ಯಾವುದೋ ವಿಷಪೂರಿತ ಹಾವು ಕಡಿದಿತ್ತು. ಕೂಡಲೇ ಚಿಕಿತ್ಸೆಯ ಬಗ್ಗೆ ಹಾಲಾಡಿಯ ಆಸ್ಪತ್ರೆಗೆ ದಾಖಲುಗೊಂಡು ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರು ತಿಳಿಸಿದ ಮೇರೆಗೆ ಕುಂದಾಪುರ ಸರ ಕಾರಿ ಆಸ್ಪತೆಗೆ ದಾಖಲಿಸಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃತಪಟ್ಟಿದ್ದಾರೆ. ಪುತ್ರ ಲಕ್ಷ್ಮಣ ನೀಡಿದ ದೂರಿನಂತೆ ಶಂಕರ ನಾರಾಯಣ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಾಳು ಸಾವು
ಗಾರೆ ಕೆಲಸ ಮಾಡುವ ವೇಳೆ ಅಟ್ಟಣಿಗೆಯಿಂದ ಕೆಳಕ್ಕೆ ಬಿದ್ದು ಗಾಯಗೊಂಡಿದ್ದ ಮರವಂತೆ ನಿವಾಸಿ ಖಾಸಿಂ ಎಂಬವರು ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟಿದ್ದಾರೆ. ನಾವುಂದ ಗ್ರಾಮದ ಬಡಾಕೆರೆ ನಿವಾಸಿ ಸುಮ ಅವರ ಮನೆಯ ಕೆಲಸ ನಿರ್ವಹಿಸುತ್ತಿದ್ದ ಆಕಸ್ಮಿಕ ಕೆಳಕ್ಕೆ ಬಿದ್ದು ಗಾಯಗೊಂಡಿದ್ದರು. ಅವರನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಡುಮದ್ದು ದಾಸ್ತಾನು : ಪ್ರಕರಣ ದಾಖಲು
ಕುಂದಾಪುರ: ಉಪ್ಪುಂದ ಗ್ರಾಮದ ಬಳಿಯಲ್ಲದತ್ತಾತ್ರೇಯ ಎಂಬವರು ತನ್ನ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡು ಅದರಲ್ಲಿ ಕಳೆದ 3 ತಿಂಗಳುಗಳಿಂದ ಸುಡು ಮದ್ದು ದಾಸ್ತಾನು ಮಾಡಿ ವ್ಯಾಪಾರ ನಡೆಸು ತ್ತಿದ್ದು, ಇದರಿಂದ ಸುತ್ತಮುತ್ತಲಿನ 100ಕ್ಕೂ ಮಿಕ್ಕಿ ವಾಸದ ಮನೆಗಳಿಗೆ ಜೀವ ಭಯ ಉಂಟಾಗಿದೆ ಎಂದು ರವಿಚಂದ್ರ ವಿ.ಕೆ.(48) ಉಪ್ಪುಂದ ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.