ಮಹಿಳೆಗೆ ಬೈಕ್ ಢಿಕ್ಕಿ
ಶಿರ್ವ : ಶಿರ್ವಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿಗುಡ್ಡೆ-ಕಳತ್ತೂರು ರಸ್ತೆಯಲ್ಲಿ ಶುಕ್ರವಾರ ಪಾದಚಾರಿ ಯಶೋದ ಎಂಬವರಿಗೆ ಎಂಬವರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದಾರೆ.
ಶುಕ್ರವಾರ ಬೆಳಗ್ಗೆ ಬೈಕ್ ಸವಾರ ಪ್ರಶಾಂತ ಎಂಬವರು ಶಾಂತಿಗುಡ್ಡೆ ಕಡೆಯಿಂದ ಕಳತ್ತೂರು ಪೆಟ್ರೋಲ್ ಪಂಪ್ ಕಡೆಗೆ ಚಲಾ ಯಿಸಿಕೊಂಡು ಹೋಗುತ್ತಿದ್ದಾಗ ಶೆಟ್ಟಿಗಾರ್ ಕಾಂಪೌಂಡ್ ಬಳಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಯಶೋದಾ ಅವರಿಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರನ್ನು ಶಿರ್ವ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಬೆದರಿಕೆ : ಪ್ರಕರಣ ದಾಖಲು
ಕುಂದಾಪುರ : ಪತಿಯು ದೈಹಿಕ, ಮಾನಸಿಕ ಹಿಂಸೆ ನೀಡುತ್ತಿರುವುದಾಗಿ ಕಂಡ್ಲೂರು ನಿವಾಸಿ ಸನಾ ಎಂಬವರು ದೂರು ನೀಡಿದ್ದಾರೆ. 2015ರಲ್ಲಿ ನಿಸಾರ್ ಅಹಮ್ಮದ್ ಅವರನ್ನು ಮದುವೆ ಯಾಗಿರುವ ಸನಾ ಪತಿಯ ಮನೆಯಲ್ಲಿ ಸಂಸಾರ ಮಾಡಿ ಕೊಂಡಿದ್ದರು. ಪತಿ ಪ್ರತಿದಿನ ಗಲಾಟೆ ಮಾಡುತ್ತಿದ್ದು, ದನ ಕಳವು ಇನ್ನಿತರ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಆಕ್ಷೇಪಿಸಿದ್ದಕ್ಕೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಮಿಕ ಸಾವು
ಕುಂದಾಪುರ : ಕಾಲು ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದ ಬೆಳ್ಳೆ ಗ್ರಾಮದ ಗೇರುಬೀಜ ಕಾರ್ಖಾನೆಯೊಂದರ ಕಾರ್ಮಿಕ ಉತ್ತರ ಪ್ರದೇಶ ಮೂಲದ ಜಪ್ಪುದ್ದೀನ್ ಎಂಬವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ
ಕೆಲಸ ನಿರ್ವಹಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದ ಅವರನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೇ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.
ವಾರೀಸುದಾರರಿಗೆ ಮನವಿ
ಉಡುಪಿ: ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದ 45 ವರ್ಷದ ಅಪರಿಚಿತ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ವಾರೀಸುದಾರರು ಇದ್ದಲ್ಲಿ ಜಿಲ್ಲಾ ಆಸತ್ರೆಯ ನಾಗರಿಕ ಸಹಾಯ ಕೇಂದ್ರ ಸಂಪರ್ಕಿಸಬಹುದು ಎಂದು ಜಿಲ್ಲಾಸ್ಪತ್ರೆಯ ಪ್ರಕಟಣೆ ತಿಳಿಸಿದೆ.