Home » ಅಪರಾಧ ಸುದ್ದಿಗಳು
 

ಅಪರಾಧ ಸುದ್ದಿಗಳು

by Kundapur Xpress
Spread the love

ಗಾಂಜಾ ಸೇವನೆ ದೃಢ

ಉಡುಪಿ : ಗಾಂಜಾ, ಅಮಲು ಪದಾರ್ಥ ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಮಣಿಪಾಲ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೊಹಮ್ಮದ್ ಫರ್ವೇಜ್ ಉಮ್ಮರ್ (25) ಆತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಗಾಂಜಾ ಸೇವನೆಯ ಬಗ್ಗೆ ಖಚಿತಪಡಿಸಿಕೊಳ್ಳಲಾಗಿದೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದನಕ್ಕೆ ಬೈಕ್  ಡಿಕ್ಕಿ

ಕುಂದಾಪುರ : ಯಡ್ತರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಠಾತ್ ಅಡ್ಡ ಬಂದ ದನಕ್ಕೆ ಬೈಕ್  ಡಿಕ್ಕಿ ಹೊಡೆದ ಪರಿಣಾಮ ಸವಾರ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ವಸಂತ ಮೇಸ್ತ, ಸಹಸವಾರ ವೆಂಕಟೇಶ್ ಮೇಸ್ತ ಎಂಬವರು ಗಾಯಗೊಂಡಿದ್ದಾರೆ  ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಚಿನ್ನದ ತಿಲಕ ಕಳವು

ಕುಂದಾಪುರ : ಸ್ಥಳೀಯ ಮದ್ದುಗುಡ್ಡೆಯಲ್ಲಿರುವ ಶ್ರೀ ಗುರು ರಾಘವೇಂದ್ರ ಭಜನಾ ಮಂದಿರದಲ್ಲಿ ಶ್ರೀಗುರುರಾಘವೇಂದ್ರ ಸ್ವಾಮಿಯ ಬೆಳ್ಳಿಯ ಫೋಟೊದಲ್ಲಿದ್ದ ಚಿನ್ನದ ತಿಲಕವನ್ನು ಕಳ್ಳರು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಶ್ರೀಗುರುರಾಘವೇಂದ್ರ ಸ್ವಾಮಿಯ ಬೆಳ್ಳಿಯ ಫೋಟೊಕ್ಕೆ ಭಕ್ತಾಭಿಮಾನಿಗಳು 12 ಗ್ರಾಂ ತೂಕದ ಚಿನ್ನದ ತಿಲಕ ಮಾಡಿಸಿದ್ದರು ಅ.18ರಂದು ಸ್ವಾಮಿಗೆ ಪೂಜೆ ಪುನಸ್ಕಾರ ನಡೆದಿದ್ದು ಸಂಜೆ ಪೂಜೆಯ ಹೊತ್ತಲ್ಲಿ ತಿಲಕ ಇಲ್ಲದಿರುವುದನ್ನು  ಕಂಡು ಅರ್ಚಕ ಕೌಶಿಕ್ ತಕ್ಷಣ ಭಜನಾ ಮಂದಿರದ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ. ಅಂದಾಜು 75 ಸಾವಿರ ಮೌಲ್ಯದ ಚಿನ್ನದ ತಿಲಕ ಕಳ್ಳರು ಕಳವು ಮಾ ಡಿದ್ದಾರೆ ಎಂದು ಭಜನಾ ಮಂದಿರದ ಅಧ್ಯಕ್ಷ ರಮೇಶ್ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ

ಕುಂದಾಪುರ: ಸಳ್ವಾಡಿ ನಿವಾಸಿ ಚಂದ್ರ ಅವರ ಮೇಲೆ ಶರತ್, ಕಾರ್ತಿಕ್, ಸಂತೋಷ್, ನವೀನ್, ಚೇತನ್, ಪ್ರಕಾಶ್ ಹಲ್ಲೆ ನಡೆಸಿ ಜೀವಬೆದರಿಕೆ ಯೊಡ್ಡಿದ್ದಾರೆ ಎಂದು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಣದ ವಿಚಾರಕ್ಕೆ ಸಂಭಂಧಿಸಿದಂತೆ ಕೃತ್ಯ ಎಸಗಿದ್ದಾರೆ ಎಂದು ಹಲ್ಲೆಗೊಳಗಾಗಿರುವ ಚಂದ್ರ ದೂರು ನೀಡಿದ್ದಾರೆ

ಕರಿಮಣಿ ಸರ ಎಳೆದು ಪರಾರಿ

ಕುಂದಾಪುರ : ಬೆಂಗಳೂರು- ಕಾರವಾರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಕರಿಮಣಿ ಸರವನ್ನು ಅಪರಿಚಿತ ವ್ಯಕ್ತಿ ಎಳೆದುಕೊಂಡು ಪರಾರಿಯಾದ ಘಟನೆ ಬೈಂದೂರಿನ ಬಿಜೂರು ರೈಲ್ವೆ ಸ್ಟೇಷನ್‌ ಬಳಿ ನಡೆದಿದೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಿವಾಸಿ ನಿರ್ಮಲಾ ಎಂಬವರು  ಚನ್ನರಾಯಪಟ್ಟಣದಿಂದ ಬೆಂಗಳೂರು-ಕಾರವಾರ ರೈಲಿನಲ್ಲಿ ಕುಮಟಾಕ್ಕೆ ಬರುತ್ತಿರುವ ಸಂದರ್ಭ ಬಿಜೂರು ರೈಲ್ವೆ ಸ್ಟೇಷನ್ ಹತ್ತಿರ ಬೆಳಗ್ಗಿನ ಜಾವ 5.20ರ ಸುಮಾರಿಗೆ ಅಪರಿಚಿತ ವ್ಯಕ್ತಿ ರೈಲಿನ ಬೋಗಿಯ ಕಿಟಕಿ ಸರಿಸಿ ಕುತ್ತಿಗೆಯಿಂದ ಕರಿಮಣಿ ಸರ ಹಿಡಿದೆಳೆದಿದ್ದಾನೆ. ಸರವನ್ನು ಎಳೆಯದಂತೆ ಪ್ರಯತ್ನಿಸಿದ್ದು, ಈ ವೇಳೆ ಸರ ತುಂಡಾಗಿ ಅರ್ಧ ಭಾಗ ಕಿತ್ತುಕೊಂಡು ಹೋಗಿದ್ದಾನೆ.

ಸುಮಾರು 15 ಗ್ರಾಂನಷ್ಟು ಚಿನ್ನವನ್ನು ಆರೋಪಿ ಅಪಹರಿಸಿದ್ದಾನೆ. ಅದರ ಮೌಲ್ಯ 1 ಲಕ್ಷ ರೂಪಾಯಿ ಎಂದು  ಅಂದಾಜಿಸಲಾಗಿದ್ದು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   

Related Articles

error: Content is protected !!