ಪಿಕಪ್ ಬೈಕ್ ಡಿಕ್ಕಿ
ಕಾರ್ಕಳ : ಮಹೀಂದ್ರಾ ಪಿಕಫ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಹಿರ್ಗಾನ ನೆಲ್ಲಿಕಟ್ಟೆಯಲ್ಲಿ ಗುರುವಾರ ಸಂಭವಿಸಿದೆ. ಹಿರ್ಗಾನ ನಿವಾಸಿ ಲಾರೆನ್ಸ್ ಅಫ್ರೀಡಾ (50 ವರ್ಷ) ಸಾವನ್ನಪ್ಪಿದ್ದಾರೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಾರೆ.ನೇಣು
ಬಿಗಿದುಕೊಂಡು ಆತ್ಮಹತ್ಯೆ
ಕೋಟ : ಪಾರಂಪಳ್ಳಿ ಗ್ರಾಮದ ನಿವಾಸಿ ರಾಘವೇಂದ್ರ (40 ವರ್ಷ) ಮನೆಯ ಹಾಲ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ವಿಪರೀತ ಮದ್ಯಸೇವನೆಯ ಚಟ ಹೊಂದಿದ್ದ ಅವರು ಮನೆಯಲ್ಲಿ ಯಾರು ಇಲ್ಲದ ಸಂದರ್ಭ ನೋಡಿ ಕೃತ್ಯ ಎಸಗಿದ್ದಾರೆ ಎಂದು ಸಹೋದರ ಗಣೇಶ್ ನೀಡಿದ ದೂರಿನಂತೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾನಸಿಕ ಹಿಂಸೆ : ಪ್ರಕರಣ ದಾಖಲು
ಕುಂದಾಪುರ : ಬೇಳೂರು ಗ್ರಾಮದ ಗ್ರಾಮ ಆಡಳಿತಾಧಿಕಾರಿ ಕಚೇರಿಯಲ್ಲಿ ಗ್ರಾಮ ಸಹಾಯಕಿ ಸುಶೀಲ (40) ಅವರಿಗೆ ಮಾನಸಿಕ ಹಿಂಸೆ ನೀಡಿದ ಬಗ್ಗೆ ದೂರು ದಾಖಲಾಗಿದೆ. 2019ರಿಂದ ಕಚೇರಿಯಲ್ಲಿ ಗ್ರಾಮ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚೆಗೆ ಜಯಶೀಲ, ರಾಘವೇಂದ್ರ, ಕರುಣಾಕರ, ದಿನಕರ, ಸುರೇಶ್, ಕೃಷ್ಣಯ್ಯ, ರಾಜಗೋಪಾಲ, ಅಶೋಕ ಕುಮಾರ್, ನವೀನ್ ಕುಮಾರ್, ರವಿ, ಪ್ರವೀಣ, ರಾಜೇಂದ್ರ, ಸೀತಾರಾಮ, ರವಿ, ಶಶಿಧರ ಎಂಬವರು ಉಡುಪಿ ಜಿಲ್ಲಾಧಿಕಾರಿ ಅವರಿಗೆ ನನ್ನ ವಿರುದ್ಧ ಸುಳ್ಳು ಹಾಗೂ ದುರುದ್ದೇಶಪೂರಿತ ದೂರು ಅರ್ಜಿ ಸಲ್ಲಿಸಿ ದೌರ್ಜನ್ಯ ಎಸಗಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದಾರೆ. ದೂರು ಸ್ವೀಕರಿಸಿದ ನ್ಯಾಯಾಲಯವು ಪ್ರಕರಣದ ತನಿಖೆಗೆ ಆದೇಶಿಸಿದ ಹಿನ್ನೆಲೆಯಲ್ಲಿ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.