ವರದಕ್ಷಿಣೆ ಕಿರುಕುಳ
ಕುಂದಾಪುರ : ಹೆಚ್ಚಿನ ವರದಕ್ಷಿಣೆ ತರುವಂತೆ ಗಂಡ ಕಿರುಕುಳ ನೀಡುತ್ತಿರುವುದಾಗಿ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಕೋಟ ನಿವಾಸಿ ಸುಷ್ಮಾ ಎಂಬವರು ನ.11 2022ರಂದು ಸಂಪತ್ ಎಂಬವರನ್ನು ಮದುವೆಯಾಗಿದ್ದು ಈ ಸಂದರ್ಭ 4.00 ಲಕ್ಷ ರೂ ನಗದು ಹಾಗೂ ಚಿನ್ನದ ಸರ ವರದಕ್ಷಿಣೆಯಾಗಿ ನೀಡಲಾಗಿತ್ತು. ಮದುವೆ ನಂತರದಲ್ಲಿ ಗಂಡ ಸಂಪತ್ ಮತ್ತಷ್ಟು ವರದಕ್ಷಕಿಣೆಗಾಗಿ ಪ್ರತಿದಿನ ದೈಹಿಕ, ಮಾನಸಿಕ ಪೀಡನೆ ನೀಡುತ್ತಿರುವುದಾಗಿ ಅವರು ಕೋಟ ಠಾಣಿಯಲ್ಲಿ ದೂರು ನೀಡಿದ್ದಾರೆ
ಶಾಲೆ ವಿದ್ಯಾರ್ಥಿ ಆತ್ಮಹತ್ಯೆ
ಬೈಂದೂರು ತಾಲೋಕಿನ ಶಿರೂರು ಗ್ರಾಮದ ಮೇಲ್ಪಂಕಿ ಎಂಬಲ್ಲಿ ಶಾಲಾ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ವಿದ್ಯಾರ್ಥಿ ನಿತಿನ್ ಆಚಾರ್ ಶಾಲಾ ಕಚೇರಿಗೆ ತೆರಳಿ ವರ್ಗಾವಣೆ ಪತ್ರ ಪಡೆಯಲು ಹೋದ ವೇಳೆ ಅಲ್ಲಿ ಶಿಕ್ಷಕರು ಬೈದಿದ್ದಾರೆ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ.
ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ
ಕುಂದಾಪುರ : ನೂಜಾಡಿ ಗ್ರಾಮದ ನಿವಾಸಿಯಾದ ಪಾರ್ವತಿ (65ವರ್ಷ) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವಾರು ವರ್ಷದಿಂದ ಉಬ್ಬಸ ಕಾಯಿಲೆಯಿಂದ ಬಳಲುತ್ತಿದ್ದ ಇವರು ಇದೇ ಕಾರಣಕ್ಕೆ ಮನನೊಂದು ಮನೆಯಲ್ಲಿ ಇಲಿಪಾಷಾಣ ಸೇವಿಸಿ ಅಸ್ಪಸ್ಥಗೊಂಡಿದ್ದರು. ಚಿಕಿತ್ಸೆಯ ಬಗ್ಗೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಹನ ಡಿಕ್ಕಿ: ಸಾವು
ಕುಂದಾಪುರ: ಅಪರಿಚಿತ ವಾಹನ ಡಿಕ್ಕಿ ಹೊಡೆದು ಕೃಷಿ ಕೂಲಿ ಕಾರ್ಮಿಕ ಬೈಂದೂರಿನ ಕರ್ಗಾಲು ನಿವಾಸಿ ಮಾಧವ (53) ಮೃತಪಟ್ಟ ಘಟನೆ ಬೈಂದೂರಿನ ಕೆರ್ಗಾಲು ಎಂಬಲ್ಲಿ ನಡೆದಿದೆ. ಕೆರ್ಗಾಲು ಗ್ರಾಮದ ಪರಿಚಯ ಹೋಟೆಲ್ ಸಮೀಪ ಸರ್ವೀಸ್ ರಸ್ತೆಯಲ್ಲಿ ಬಿದ್ದುಕೊಂಡಿದ್ದ ಅವರನ್ನು ಸಂಬಂಧಿ ರಾಜೇಶ್ ಬಂದು ನೋಡುವಾಗ ಮೃತಪಟ್ಟಿದ್ದರು. ಯಾವುದೊ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಕಳವು
ರೈಲ್ವೆ ಇಲಾಖೆ ಟ್ರಾಕ್‌ಮೆನ್ ದಿನೇಶ್ ಎಂಬವರ ಬೈಕ್ ಕಳವು ಆಗಿದೆ. ಬಡಾಕೆರೆ ರೈಲ್ವೆ ಹಳಿ ಸಮೀಪ ಗೇರು ಪ್ಲಾಂಟೇಶನ್‌ನಲ್ಲಿ ಬೆಂಕಿ ಕಾಣಿಸಿ ಕೊಂಡಿದೆ ಎಂಬ ಮಾಹಿತಿ ಮೇರೆಗೆ ತೆರಳಿದ್ದ ಅವರು ಸ್ಪಾಟ್ ಗೆ ಹೋಗಿ ವಾಪಸ್ ಬರುವಾಗ ಬೈಕ್ ಕಳವಾಗಿತ್ತು