138
ಕುಂದಾಪುರ : ವ್ಯಕ್ತಿಯೊಬ್ಬರು ಮೊಬೈಲ್‌ಗೆ ಬಂದ ಲಿಂಕ್ ಒತ್ತಿ ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಕುಂದಾಪುರದಲ್ಲಿ ನಡೆದಿದೆ.
ಕುಂದಾಪುರದಲ್ಲಿ ಕೇಬಲ್ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದ ಸುಧಾಕರ ಎಂಬುವರ ಮೊಬೈಲ್‌ಗೆ ಅಪರಿಚಿತ ನಂಬರಿನಿಂದ ಬಂದ ಸಂದೇಶವನ್ನು ಉಡುಪಿ ಆರ್‌ಟಿಒದಿಂದ ಬಂದ ಮೆಸೇಜ್ ಎಂದು ಭಾವಿಸಿ ಮೆಸೇಜ್‌ನಲ್ಲಿನ ಲಿಂಕ್‌ನ್ನು ಒತ್ತಿದ್ದರು. ಬೀಜಾಡಿಯಲ್ಲಿ ಕೆಲಸ ಮಾಡುತ್ತಿರುವಾಗ ಮೊಬೈಲ್‌ಗೆ ಬಂದ ಮೆಸೇಜನ್ನು ನೋಡಿದಾಗ, ಒಟಿಪಿ ಹಾಗೂ ಹಣ ಕಟ್ಟಾಗಿರುವ ಬಗ್ಗೆ ಮೆಸೇಜ್ ಬಂದಿತ್ತು. ಕೂಡಲೇ ಬ್ಯಾಂಕ್‌ಗೆ ತೆರಳಿ ಬ್ಯಾಂಕ್ ಆಕೌಂಟ್ ಸ್ಟೇಟ್ ಮೆಂಟ್‌ನ್ನು ನೋಡಿದಾಗ ಸುಧಾಕರ ಅವರ ಕ್ರೆಡಿಟ್ ಕಾರ್ಡ್ ನಂಬ್ರದಿಂದ ಅವರಿಗೆ ತಿಳಿಯದ ಹಾಗೇ ಒಟ್ಟು 1.23 ಲಕ್ಷ ರೂ.ಅಲ್ಲದೆ ಖಾತೆಯಲ್ಲಿದ್ದ 64,045 ರೂ. ಸೇರಿದಂತೆ ಒಟ್ಟು 1.87 ಲಕ್ಷ ರೂ. ಮೋಸ ಮಾಡಿ ಲಪಟಾಯಿಸಿರುವುದು ಬೆಳಕಿಗೆ ಬಂದಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

