246
ಕುಂದಾಪುರ : ಬೆಂಗಳೂರು ತ್ಯಾಗರಾಜ ನಗರ ನಿವಾಸಿ ಸಿ.ಆರ್. ಗೋವಿಂದರಾಜು ಅವರ ಪ್ರಥಮ ಪುತ್ರಿ ವಸುಧಾ ಚಕ್ರವರ್ತಿ (46 ವರ್ಷ) 3 ದಿನಗಳ ಹಿಂದೆ ಕೊಲ್ಲೂರಿಗೆ ಆಗಮಿಸಿದ್ದು ಅವರ ಮೃತದೇಹ ಕೊಲ್ಲುರು ಸಮೀಪದ ಮಾವಿನಕಾರು ಸೇತುವೆ ಬಳಿ ಸೌಪರ್ಣಿಕಾ ನದಿಯಲ್ಲಿ ಪತ್ತೆಯಾಗಿದೆ.
ಅವರು ಖಾಸಗಿ ವಸತಿಗೃಹದ ಬಳಿ ಕಾರು ನಿಲ್ಲಿಸಿ ದೇಗುಲಕ್ಕೆ ಹೋಗಿದ್ದರು. ಬಳಿಕ ಸೌಪರ್ಣಿಕಾ ನದಿಯತ್ತ ತೆರಳಿ ನಾಪತ್ತೆಯಾಗಿದ್ದರು.
ಮುಳುಗು ತಜ್ಞ ಈಶ್ವರ ಮಲ್ಪೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಹಾಗು ಸ್ಥಳೀಯರು ಸೌಪರ್ಣಿಕಾ ನದಿ ಸಹಿತ ವಿವಿದೆಡೆ ಶೋಧ ಕಾರ್ಯ ನಡೆಸಿದ್ದರೂ ಅವರ ಮೃತದೇಹ ಪತ್ತೆಯಾಗಿರಲಿಲ್ಲ. ನಿನ್ನೆ ಮತ್ತೆ ಈಶ್ವರ ಮಲ್ಪೆ ರಭಸದಿಂದ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿಗಿಳಿದು ಶೋಧ ನಡೆಸಿದಾಗ ಮಾವಿನಕಾರು ಬಳಿಯ ಪೊದೆಯಲ್ಲಿ ಮೃತದೇಹ ಪತ್ತೆಯಾಯಿತು.
ಮುಳುಗು ತಜ್ಞ ಈಶ್ವರ ಮಲ್ಪೆ ಅವರ ಸಾಹಸವನ್ನು ಗ್ರಾಮಸ್ಥರು ಹಾಗೂ ಪೊಲೀಸರು ಅಭಿನಂದಿಸಿದ್ದಾರೆ

