ಕಾರ್ಕಳ : ವಿಷ ಸೇವಿಸಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ರೆಂಜಳದಲ್ಲಿ ನಡೆದಿದೆ. ಜಾಳ ಗ್ರಾಮದ ಮೈಮುನಾ ಮೃತ ಮಹಿಳೆ. ಮೈಮುನಾ ಅವರಿಗೆ 2017ರಲ್ಲಿ ಕಸಬಾ ಗ್ರಾಮದ ಜೋಡುರಸ್ತೆಯ ಮಹಮ್ಮದ್ ರಿಜ್ವಾನ್ ಎಂಬವರೊಂದಿಗೆ ಮದುವೆಯಾಗಿತ್ತು. ಗಂಡನ ಮನೆಯವರು ಹಿಂಸೆ ನೀಡುತ್ತಿದ್ದು, ಇದರಿಂದ ಬೇಸತ್ತು ನ.28ರಂದು ಇಲಿ ಪಾಷಾಣ ಸೇವಿಸಿದ್ದರು. ಅಸ್ವಸ್ಥಳಾದ ಮೈಮೂನಾಳನ್ನು ಅವಳ ಪತಿ ಕಾರ್ಕಳ ಸಿಟಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಅಲ್ಲಿಂದ ನ.30ರಂದು ಬೆಂಗಳೂರಿನ ನಾರಾಯಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಮೈಮೂನಾಳಿಗೆ ಅವಳ ಅತ್ತೆ ನೂರ್‌ಜಾನ್, ಮಾವ ಮೊಹಮ್ಮದ್ ಶರೀಪ್, ಸಿರಾಜ್, ಸಿರಾಜ್‌ನ ಹೆಂಡತಿ ರಫಾತ್, ಅಬ್ದುಲ್ ಖಾದರ್, ಮಜೀದ್, ಮೆಹರುನ್ನಿಸಾ ಮತ್ತು ದಿಲ್‌ದ್ ಮಾನಸಿಕ ಹಿಂಸೆ ನೀಡಿ, ಸಾಯಲು ಪ್ರೇರಣೆ ನೀಡಿದ ಕಾರಣದಿಂದ ವಿಷ ಸೇವಿಸಿ ಸಾವನಪ್ಪಿದ್ದಾಳೆ ಎಂದು ಮೃತಳ ಅಕ್ಕ ರಶೀದಾ ಬಾನು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.