ಉಳ್ಳೂರು-74 ಗ್ರಾಮದ ಅಬ್ಬಿಬೇರು ಎಂಬಲ್ಲಿ ಬಿಜು ಆಗಸ್ಟಿನ್ ಅವರ ತೋಟದಲ್ಲಿ ಅಡಿಕೆ ಕೊಯುತ್ತಿರುವಾಗ ಅಲ್ಯುಮೀನಿಯಂ ಕೊಕ್ಕೆ(ದೋಟಿ)ಯು ವಿದ್ಯುತ್ ತಂತಿಗೆ ಸ್ಪರ್ಶಿಸಿ, ಝಾರ್ಖಂಡ್ ರಾಜ್ಯದ ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ
ಝಾರ್ಖಂಡ್ ರಾಜ್ಯದ ರಾಂಜಿ ಜಿಲ್ಲೆಯ ಲುಪುಂಗ ಗ್ರಾಮದ ರಾಮ್ ಕಿಶುನ್ ಓರಾನ್ ಮೃತಪಟ್ಟವರು. ವಿದ್ಯುತ್ ಆಘಾತಕ್ಕೊಳಗಾಗಿ ನೆಲಕ್ಕೆ ಬಿದ್ದ ಅವರನ್ನು ಕೂಡಲೇ ಸ್ಥಳೀಯರು ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ