ಮಣಿಪಾಲ : ಮನೆಯ ಮಹಡಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಮಣಿಪಾಲದಲ್ಲಿ ನಡೆದಿದೆ.
ಸಪ್ತಗಿರಿ ನಗರ ನಿವಾಸಿ, ಮೂರನೇ ವರ್ಷದಲ್ಲಿ ಬಿಕಾಂ ಓದುತ್ತಿದ್ದ ಕಾರ್ತಿಕ್ (21 ವರ್ಷ) ಅವರು ಜ. 12ರಂದು ರಾತ್ರಿ ಊಟ ಮುಗಿಸಿ ಮೊಬೈಲ್ ಹಿಡಿದುಕೊಂಡು ಮನೆಯ ಇನ್ನೊಂದು ಮಹಡಿಗೆ ಹೋದವರು ಮನೆಯ ಮೇಲ್ಗಡೆಯ ದಂಡೆಯಲ್ಲಿ ಹಾಡು ಕೇಳುತ್ತಾ ಕುಳಿತಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿತ್ತು. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತುಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.