Home » ಮದ್ಯವರ್ಜನ ಶಿಬಿರದಲ್ಲಿ ದಿಢೀರ್ ಸಾವು
 

ಮದ್ಯವರ್ಜನ ಶಿಬಿರದಲ್ಲಿ ದಿಢೀರ್ ಸಾವು

by Kundapur Xpress
Spread the love

ಮೈಸೂರು : ಮದ್ಯ ಬಿಡಿಸುವ ಸಲುವಾಗಿ ಮದ್ಯವರ್ಜನ ಕೇಂದ್ರದಲ್ಲಿ ದಾಖಲಾಗಿದ್ದ ವ್ಯಕ್ತಿಯೊಬ್ಬರು ದಿಢೀರ್ ಸಾವನ್ನಪ್ಪಿರುವ ಘಟನೆ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಟಿ ನರಸೀಪುರ ತಾಲೂಕಿನ ಸೋಸಲೆ ಗ್ರಾಮದ ಹರೀಶ್ (32) ಮೃತ ವ್ಯಕ್ತಿ ಕುಡಿತದ ಚಟಕ್ಕೆ ದಾಸನಾಗಿದ್ದ ಹರೀಶನನ್ನು ಕುಟುಂಬದವರು ಮಂಡ್ಯಕ್ಕೆ ಕರೆತಂದು ಬೇವಿನಹಳ್ಳಿಯ ಮದ್ಯವರ್ಜನ ಕೇಂದ್ರಕ್ಕೆ ಜ 11ರಂದು ದಾಖಲಿಸಿದ್ದರು.

ಹರೀಶನ ತಂಗಿ ಬಟ್ಟೆ ತೆಗೆದುಕೊಂಡು ಬಂದ ಸಮಯದಲ್ಲೂ ಆತನನ್ನು ಭೇಟಿಯಾಗುವುದಕ್ಕೆ ಕೇಂದ್ರದವರು ಅವಕಾಶ ನೀಡಿಲ್ಲ. ಈಗ ಹರೀಶ್ ಅವರನ್ನುನೋಡಲಾಗುವುದಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ. ಅದಾದ ಅರ್ಧಗಂಟೆಗೆ ಹರೀಶ್‌ ಗೆ ತೀರಾ ಹುಷಾರಿಲ್ಲದಿರುವ ಕಾರಣ ಆಸ್ಪತ್ರೆಗೆ ದಾಖಲಿಸಿರುವುದಾಗಿ ವಿಷಯ ಮುಟ್ಟಿಸಿದ್ದಾರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಹರೀಶ್ ಸಾವಿಗೀಡಾಗಿದ್ದನೆಂದು ಹೇಳಲಾಗಿದೆ

 

Related Articles

error: Content is protected !!