125
ಕೊಲ್ಲೂರು : ಕೇರಳ ಮೂಲದ ವ್ಯಕ್ತಿ ಕೊಲ್ಲೂರು ಸೌಪರ್ಣಿಕಾ ನದಿಯಲ್ಲಿ ಸಂಜೆ ಈಜಲು ತೆರಳಿ ಆಯತಪ್ಪಿ ನೀರಲ್ಲಿ ಮುಳುಗಿ ಸಾವನಪ್ಪಿದ ಘಟನೆ ನಡೆದಿದೆ.
ಮೃತ ವ್ಯಕ್ತಿ ಕೇರಳದ ಕೊಟ್ಟಾಯಂ ನಿವಾಸಿ ಕಬೀಲ್ (32 ವರ್ಷ) ಎಂದು ಗುರುತಿಸಲಾಗಿದೆ ಕಾಂತಾರ -2 ಸಿನೆಮಾ ತಂಡದ ಇತರ ಇಬ್ಬರೊಂದಿಗೆ ಈಜಲು ತೆರಳಿದರೆನ್ನಲಾಗಿದೆ. ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

