146
ಕುಂದಾಪುರ : ಕೋಟೇ ಶರ ಗ್ರಾಮದ ಎಂ ಕೋಡಿಯಿಂದ ಹಳೆ ಅಳಿವೆಗೆ ಹೋಗುವ ರಸ್ತೆಯ ಕೊಂಬಾರ ಎಂಬ ರೆಸಾರ್ಟ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿದ್ದ 10 ಮಂದಿ ವಿರುದ್ಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಂಜಾ ನಾಯ್ಕ ಎನ್. ನೇತೃತ್ವದ ಕುಂದಾಪುರ ಪೊಲೀಸರ ತಂಡ ಜುಗಾರಿ ಅಡ್ಡೆಗೆ ದಾಳಿ ನಡೆಸಿದ್ದು ಸ್ಥಳದಲ್ಲಿ ಆಟಕ್ಕೆ ಬಳಸಿದ 4,640 ರೂ., ಇತರ ಪರಿಕರಗಳು, 2 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ಸುರೇಶ ತೆಕ್ಕಟ್ಟೆ ಸಂದೇಶ, ಶಂಕರ ಕುಂಭಾಶಿ, ಜಯರಾಮ್ ತೆಕ್ಕಟ್ಟೆ ಶ್ರೀನಿವಾಸ ಕುಂಭಾಶಿ, ವಿನಾಯಕ ಕುಂಭಾಶಿ, ಗಣೇಶ್ ಸಾಲಿಗ್ರಾಮ, ರಾಜು ಕೋಟ, ರಾಜು ಕುಂಭಾಶಿ ಹಾಗೂ ಬಾಬು ತೆಕ್ಕಟ್ಟೆ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

